
ಹೊಸಪೇಟೆ, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಹೊಸಪೇಟೆ ಘಟಕದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ನೂತನ ಪ್ರತಿಷ್ಠಿತ ರಾಜಹಂಸ ಬಸ್ ಸೌಲಭ್ಯವನ್ನು ಬಳ್ಳಾರಿಯಿಂದ ವಾಸ್ಕೋಗೆ ಸಂಚಾರ ಆರಂಭಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಹುದ್ದಾರ ತಿಳಿಸಿದ್ದಾರೆ.
ಸಂಚರಿಸುವ ಮಾರ್ಗ : ಬಳ್ಳಾರಿಯಿಂದ ರಾತ್ರಿ 07: 15 ಕ್ಕೆ ನಿರ್ಗಮಿಸಿ ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಅನಮೋಡ, ಮೊಲಮ್, ಪೆÇಂಡಾ ಮತ್ತು ಮಡಗಾವ ಮಾರ್ಗವಾಗಿ ವಾಸ್ಕೋಗೆ ಬೆಳಿಗ್ಗೆ 5:15 ಕ್ಕೆ ತಲುಪುತ್ತದೆ. ಹಾಗೂ ವಾಸ್ಕೋದಿಂದ ಸಂಜೆ 6:30ಕ್ಕೆ ನಿರ್ಗಮಿಸಿ ಬಳ್ಳಾರಿಗೆ ಬೆಳಿಗ್ಗೆ 4:30 ಕ್ಕೆ ತಲುಪಲಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಸದುಪಯೋಗ ಪಡೆಯಬೇಕು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್