ರಾಷ್ಟ್ರೀಯ ಏಕತಾ ದಿನ ; ಶುಭಾಶಯ ಕೋರಿದ ಮುಖ್ಯಮಂತ್ರಿ
ಬೆಂಗಳೂರು, 31 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಗಾಂಧಿವಾದದ ನೆರಳಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು, ಸ್ವಾತಂತ್ರ್ಯ ನಂತರ ಅಖಂಡ ಭಾರತ ನಿರ್ಮಾಣದ ಸಂಕಲ್ಪತೊಟ್ಟು, ಆ ಹಾದಿಯಲ್ಲಿ ಎದುರಾದ ಎಲ್ಲ ಕಠಿಣ ಸವಾಲುಗಳನ್ನು ಮೆಟ್ಟಿನಿಂತು ಯಶಸ್ವಿಯಾದ ಉಕ್ಕಿನ ಮನ
Cm


ಬೆಂಗಳೂರು, 31 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಗಾಂಧಿವಾದದ ನೆರಳಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು, ಸ್ವಾತಂತ್ರ್ಯ ನಂತರ ಅಖಂಡ ಭಾರತ ನಿರ್ಮಾಣದ ಸಂಕಲ್ಪತೊಟ್ಟು, ಆ ಹಾದಿಯಲ್ಲಿ ಎದುರಾದ ಎಲ್ಲ ಕಠಿಣ ಸವಾಲುಗಳನ್ನು ಮೆಟ್ಟಿನಿಂತು ಯಶಸ್ವಿಯಾದ ಉಕ್ಕಿನ ಮನುಷ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಏಕತಾ ದಿನದ ಅಂಗವಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಪಟೇಲರ ಉತ್ಕಟ ರಾಷ್ಟ್ರಪ್ರೇಮ, ರಾಜಕೀಯ ನೈಪುಣ್ಯತೆ, ಜಾತ್ಯತೀತ ಸಿದ್ಧಾಂತಗಳಲ್ಲಿ‌ ಅವರಿಗಿದ್ದ ಬದ್ಧತೆಯನ್ನು ನೆನೆದು, ನಮಿಸೋಣ. ಈ ದಿನ ಅಖಂಡ ಭಾರತವನ್ನು ಸಮತೆಯ ಭಾರತವಾಗಿಸುವ ಶಪಥಗೈಯ್ಯೋಣ ಎಂದು ರಾಷ್ಟ್ರೀಯ ಏಕತಾ ದಿನದ ಶುಭಾಶಯ ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande