
ವಿಜಯಪುರ, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಜಿಲ್ಲೆಯ 25 ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ನಾಳೆ ಜರುಗುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಯ್ಕೆಯಾದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಬಯಲಾಟ ಕ್ಷೇತ್ರದಲ್ಲಿ ಅಶೋಕ ಭೀಮಣ್ಣ ಬಿರಾದಾರ,ಶಿಲ್ಪಕಲೆ ಕ್ಷೇತ್ರದಲ್ಲಿ ಪರಶುರಾಮ ನರಸಪ್ಪ ಇಂಚಗೇರಿ,ಚಿತ್ರಕಲೆ ಕ್ಷೇತ್ರದಲ್ಲಿ ಹಣಮಂತ ಪಾರೀಶ ಕದ್ರಾಪುರ,ಜಾನಪದ ಕ್ಷೇತ್ರದಲ್ಲಿ ಬಸವಣ್ಣ ನೀಲಕಂಠಪ್ಪ ಕರಭಂಟನಾಳ,ಧರ್ಮು ಧನಸಿಂಗ ರಾಠೋಡ ಹಾಗೂ ಶ್ರೀಮತಿ ಇಮಾಂಬಿ ಇಮಾಮಸಾಬ ದೊಡಮನಿ,ಸಮಾಜ ಸೇವೆ ಕ್ಷೇತ್ರದಲ್ಲಿ ವೇ.ಮೂ.ಡಾ.ವಿಶ್ವನಾಥ ಪರತಯ್ಯ ಮಠ,ಸುರೇಶ ರಾಮಚಂದ್ರ ಬಿಜಾಪುರ, ಅನೀಲಕುಮಾರ ಭಾರತ ಥೋರತ ಹಾಗೂ ಮೌನೇಶ ಗುರಪ್ಪ ಬಡಿಗೇರ ಇವರನ್ನು ಆಯ್ಕೆ ಮಾಡಲಾಗಿದೆ.
ಸಂಕೀರ್ಣ-ಇತರೆ ಕ್ಷೇತ್ರದಲ್ಲಿ ಯಮನಪ್ಪ ಹಣಮಂತ್ರಾಯ ಬಳವಾಟ ಹಾಗೂ ಬಾಬು ಲಚ್ಚು ರಾಠೋಡ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಶ್ರೀಮತಿ ಐಶ್ವರ್ಯರಾಣಿ ವಿರುಪಾಕ್ಷಪ್ಪ ತಾಳಿಕೋಟಿ, ಮಲ್ಲಪ್ಪ ವೀರಭದ್ರಪ್ಪ ಪಟ್ಟಣಶೆಟ್ಟಿ, ಬಸವರಾಜ ಸಂಪಳ್ಳಿ, ಪರಶುರಾಮ ಭಾಸಗಿ, ನಿಂಗಪ್ಪ ನಾವಿ ಹಾಗೂ ಟಿವಿ ಮಾಧ್ಯಮ ಕ್ಷೇತ್ರದಲ್ಲಿ ಸುನೀಲ ಕಾಂಬ್ಳೆ ಅವರನ್ನು ಆಯ್ಕೆ ಮಾಡಲಾಗಿದೆ.
ರಂಗಭೂಮಿ ಕ್ಷೇತ್ರದಲ್ಲಿ ಶ್ರೀಮತಿ ಸೈದಾಮಾ ಕರ್ಜಗಿ ಉರ್ಪ್ ಬೇಬಿ ದಂಡಿನ ಹಾಗೂ ಆಶ್ಪಕ ಹುಸೇನ ಹಾಪೀಜಹುಸೇನ ಜಾಗೀರದಾರ, ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ ರಾಮಚಂದ್ರ ಸಿದ್ರಾಮಪ್ಪ ವಾಡೇದ,ಸಂಗೀತ ಕ್ಷೇತ್ರದಲ್ಲಿ ಶ್ರೀಮತಿ ಮಂಜುಳಾ ದತ್ತಾತ್ರೇಯ ಹಿಪ್ಪರಗಿ, ಶಿಕ್ಷಣ ಕ್ಷೇತ್ರದಲ್ಲಿ ಶ್ರೀಮತಿ ಶಶಿಕಲಾ ಗುರುನಾಥರಾವ್ ಹಾಗೂ ಶ್ರೀಮತಿ ರಜಿಯಾ ಬೇಗಂ ಗೈಜಿಸಾಹೇಬ ಕೊಟ್ನಾಳ ಹಾಗೂ ಕೃಷಿ ಕ್ಷೇತ್ರದಲ್ಲಿ ಭೀರಪ್ಪ ಚಿನ್ನಪ್ಪ ವಗ್ಗಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande