
ಗಂಗಾವತಿ, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಸಾಲ ಸೌಲಭ್ಯ ನೀಡುವ ಅವಧಿ ವಿಸ್ತರಣೆಯಾಗಿದ್ದು, ಗಂಗಾವತಿ ನಗರಸಭೆಯಿಂದ ಸಾಲಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಪೌರಾಯಕ್ತ ವಿರುಪಾಕ್ಷ ಮೂರ್ತಿ ಅವರು ತಿಳಿಸಿದ್ದಾರೆ.
ಗಂಗಾವತಿ ನಗರ ವ್ಯಾಪ್ತಿಯ ಮಾರುಕಟ್ಟೆ, ರಸ್ತಪಕ್ಕ, ನೆಲದ ಮೇಲೆ, ತಳ್ಳುಬಂಡಿ, ತಲೆಮೇಲೆ ಒತ್ತು ಮಾರುವವರು, ಹೊಸದಾಗಿ ಬೀದಿಬದಿ ವ್ಯಾಪಾರ ಆರಂಭಿಸುವವರು ಕಿರುಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಮೊದಲ ಹಂತದಲ್ಲಿ 15 ಸಾವಿರ ರು, ಎರಡನೇ ಹಂತದಲ್ಲಿ ಐವತ್ತು ಸಾವಿರ ರು, ಬ್ಯಾಂಕುಗಳ ಮೂಲಕ ಸಾಲ ನೀಡಲಾಗುತ್ತಿದ್ದು, ಬೀದಿ ಬದಿ ವ್ಯಾಪಾರಿಗಳು ಸಾಲದ ಪಡೆಯಲು ಗುರುತಿನ ಚೀಟಿ, ರೇಷನ್ ಕಾಡ್, ಬ್ಯಾಂಕ್ ಪಾಸ್ ಬುಕ್, ಪೊಟೋ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಗತ್ಯ ದಾಖಲೆಗಳೊಂದಿಗೆ ಗಂಗಾವತಿ ನಗರಸಭೆ ಸಮುದಾಯ ಸಂಘಟನಾಧಿಕಾರಿ ವಿಜಯಲಕ್ಷ್ಮಿ ಇವರಿಗೆ ಸಲ್ಲಿಸಲು ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್