ಬೇಸಿಗೆ ಬೆಳೆಗೆ ನೀರು ಬಿಡದಿದ್ದಲ್ಲಿ ಹೋರಾಟ : ತುಂಗಭದ್ರ ರೈತ ಸಂಘ
ಬಳ್ಳಾರಿ, 31 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬೇಸಿಗೆ ಬೆಳೆಗೆ ನೀರು ಬಿಡದಿದ್ದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ತುಂಗಭದ್ರ ರೈತ ಸಂಘದ ಅಧ್ಯಕ್ಷರಾದ ದರೂರು ಡಾ. ಪುರುಷೋತ್ತಮಗೌಡ ಅವರು ತಿಳಿಸಿದ್ದಾರೆ. ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಬೇಸಿಗೆ ಬೆಳೆಗೆ ನೀರು ಬಿಡದಿದ್ದಲ್ಲಿ ಹೋರಾಟ : ತುಂಗಭದ್ರ ರೈತ ಸಂಘ


ಬೇಸಿಗೆ ಬೆಳೆಗೆ ನೀರು ಬಿಡದಿದ್ದಲ್ಲಿ ಹೋರಾಟ : ತುಂಗಭದ್ರ ರೈತ ಸಂಘ


ಬೇಸಿಗೆ ಬೆಳೆಗೆ ನೀರು ಬಿಡದಿದ್ದಲ್ಲಿ ಹೋರಾಟ : ತುಂಗಭದ್ರ ರೈತ ಸಂಘ


ಬಳ್ಳಾರಿ, 31 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬೇಸಿಗೆ ಬೆಳೆಗೆ ನೀರು ಬಿಡದಿದ್ದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ತುಂಗಭದ್ರ ರೈತ ಸಂಘದ ಅಧ್ಯಕ್ಷರಾದ ದರೂರು ಡಾ. ಪುರುಷೋತ್ತಮಗೌಡ ಅವರು ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಉತ್ತಮ ಪ್ರಮಾಣದಲ್ಲಿ ಮಳೆ ಸುರಿದಿದೆ. ತುಂಗಭದ್ರಾ ಜಲಾಶಯದಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗಿದೆ. ಎರಡನೇ ಬೆಳೆಗೆ (ಬೇಸಿಗೆ ಬೆಳೆ)ಗೆ ನೀರು ನೀಡದೇ ಇದ್ದಲ್ಲಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುತ್ತಾರೆ. ಕಾರಣ ರೈತರನ್ನು ಆರ್ಥಿಕವಾಗಿ ಸಂರಕ್ಷಿಸಲಿಕ್ಕಾಗಿಯೇ ತುಂಗಭದ್ರಾ ಜಲಾಶದಿಂದ ಎರಡನೇ ಬೆಳೆಗೆ ನೀರು ಬಿಡಬೇಕು ಎಂದು ಅವರು ಆಗ್ರಹಿಸಿದರು.

ತುಂಗಭದ್ರಾ ಜಲಾಶಯಕ್ಕೆ 33 ಕ್ರಸ್ಟ್‍ಗೇಟ್‍ಗಳನ್ನು ಅಳವಡಿಸಲು ಮೂರು ತಿಂಗಳಾವಧಿ ಸಾಕು. ಫೆಬ್ರವರಿಯಿಂದ ಕ್ರಸ್ಟ್‍ಗೇಟ್ ಅಳವಡಿಸುವ ಕಾರ್ಯವನ್ನು ಪ್ರಾರಂಭಿಸಬಹುದಾಗಿದೆ. ಕಾರಣ ಜಲಾಶಯದಿಂದ 40 ಟಿಎಂಸಿ ನೀರನ್ನು ಕಾಲುವೆಗಳ ಮೂಲಕ ಬಿಡಬಹುದಾಗಿದೆ. ಕಾರಣ ಎರಡನೆಯ ಬೆಳೆಯನ್ನು ಬೆಳೆದ ನಂತರ ಕ್ರಸ್ಟ್‍ಗೇಟ್‍ಗಳನ್ನು ಅಳವಡಿಸುವ ಕೆಲಸವನ್ನು ಪ್ರಾರಂಭಿಸಬೇಕು ಎಂದರು.

ಬೇಸಿಗೆ ಬೆಳೆಗೆ ನೀರು ಬಿಡುವ ನಿಟ್ಟಿನಲ್ಲಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ಶಾಸಕರು, ಸಂಸದರು, ಜನಪ್ರತಿನಿಧಿಗಳು ರೈತರ ಪರವಾದ ನಿರ್ಧಾರವನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಹಂತ ಹಂತವಾಗಿ ಈ ಭಾಗದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಕಾರಣ ಶೀಘ್ರದಲ್ಲೇ ನೀರಾವರಿ ಸಲಹಾ ಸಮಿತಿಯ ಸಭೆಯನ್ನು ನಡೆಸಬೇಕು ಎಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande