ಸ್ಪರ್ಧಾತ್ಮಕ ಪರೀಕ್ಷೆ ಪೂರ್ವಭಾವಿ ತರಬೇತಿ ಸಿದ್ಧತಾ ಸಭೆ
ರಾಯಚೂರು, 31 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಹಿಂದುಳಿದ ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಐಆರ್‍ಎಸ್, ಕೆಎಎಸ್ ಪಾಸು ಮಾಡಬೇಕು. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎನ್ನುವ ಆಶಯದಡಿ ಯೋಚಿಸಿ, ಯೋಜಿಸಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ
ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ತರಬೇತಿ: ಸಿದ್ಧತಾ ಸಭೆ


ರಾಯಚೂರು, 31 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಹಿಂದುಳಿದ ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಐಆರ್‍ಎಸ್, ಕೆಎಎಸ್ ಪಾಸು ಮಾಡಬೇಕು. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎನ್ನುವ ಆಶಯದಡಿ ಯೋಚಿಸಿ, ಯೋಜಿಸಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಪ್ರಪ್ರಥಮ ಬಾರಿಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾಡಳಿತದಿಂದ ಪ್ರಪ್ರಥಮ ಬಾರಿಗೆ ರಾಯಚೂರ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಶಿಬಿರ ಆಯೋಜನೆ ಮಾಡಿದ್ದಾರೆ.

ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಈ ತರಬೇತಿ ಶಿಬಿರದ ಸಿದ್ಧತಾ ಸಭೆಯು ಜಿಲ್ಲಾ ರಂಗಮಂದಿರ ಹಿಂದುಗಡೆಯ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ನಡೆಯಿತು.

ಈ ತರಬೇತಿ ಶಿಬಿರದ ನೋಡಲ್ ಅಧಿಕಾರಿಗಳಾದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರವೀಣಕುಮಾರ, ತಹಸೀಲ್ದಾರರಾದ ಸುರೇಶ ವರ್ಮಾ, ಅಮರೇಶ ಬಿರಾದಾರ, ಪ್ರಚಾರ ಸಮಿತಿಯ ವಾರ್ತಾ ಇಲಾಖೆಯ ಗವಿಸಿದ್ದಪ್ಪ ಹೊಸಮನಿ, ಶಿಕ್ಷಕರ ಆಯ್ಕೆ ಸಮಿತಿಯ ಸದಸ್ಯರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಅಧಿಕಾರಿ ವೀರೇಶ ನಾಯಕ, ಸಮನ್ವಯ ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ಗ್ರಂಥಾಲಯ ಅಧಿಕಾರಿ ನಿರ್ಮಲಾ ಹೆಚ್ ಹೊಸೂರ ಅವರು ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷಗಳ ಬಗ್ಗೆ ಸಮಗ್ರ ಚರ್ಚಿಸಿದರು.

ಈ ಉಚಿತ ತರಬೇತಿಯ ಅರ್ಹತಾ ಪರೀಕ್ಷೆಯನ್ನು ನವೆಂಬರ್ 12ರಂದು ಮಧ್ಯಾಹ್ನ 3 ರಿಂದ 4.30ರವರೆಗೆ ರಾಯಚೂರಿನ ಜಿಲ್ಲಾ ರಂಗಮಂದಿರ ಹತ್ತಿರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಮೊದಲ 100 ಅಭ್ಯರ್ಥಿಗಳಿಗೆ ಮಾತ್ರ ತರಬೇತಿಗೆ ಅವಕಾಶವಿರಲಿದೆ.

ನವೆಂಬರ್ 1ರಿಂದ ನೋಂದಣಿ ಪ್ರಕ್ರಿಯೆ ಆರಂಭಿಸಿ ನವೆಂಬರ್ 8ರವರೆಗೆ ಹೆಸರು ನೋಂದಣಿಗೆ ಅವಕಾಶ ನೀಡಬೇಕು. ಕಡ್ಡಾಯವಾಗಿ ಪಿಯುಸಿ ಪಾಸಾದ ಹಾಗೂ ಪದವಿ ಓದುತ್ತಿರುವ ಅಥವಾ ಪದವಿ ಪೂರ್ಣಗೊಳಿಸಿದ ರಾಯಚೂರ ಸೇರಿದಂತೆ ರಾಜ್ಯದ ಯಾವುದೇ ಭಾಗದ ಆಸಕ್ತ ಅಭ್ಯರ್ಥಿಗಳು ಕ್ಯುಆರ್ ಕೋಡ್ ಬಳಸಿ ಹೆಸರು ನೋಂದಣಿ ಮಾಡಬೇಕು. ಈ ತರಬೇತಿಯು ಜಿಲ್ಲಾ ರಂಗಮಂದಿರದ ಹಿಂದಿನ ಜಿಲ್ಲಾ ಕೇಂದ್ರ ಗ್ರಂಥಾಲಯದ ಹೊಸ ಕಟ್ಟಡದಲ್ಲಿ 30 ದಿನಗಳ ಕಾಲ ನಡೆಯಲಿದೆ. ಈ ತರಬೇತಿಗೆ ಯಾವುದೇ ಪ್ರವೇಶಾತಿ ಮತ್ತು ತರಬೇತಿ ಶುಲ್ಕ ಇರುವುದಿಲ್ಲ. ಪ್ರತಿ ದಿನ 1 ಗಂಟೆಗಳ ಕಾಲ ವಿಶೇಷ ಆಹ್ವಾನಿತರು ಮಾತನಾಡಲಿದ್ದಾರೆ. ಪ್ರತಿ ಭಾನುವಾರವು ವಿಶೇಷ ಆಹ್ವಾನಿತರು ಮಾತನಾಡುವರು ಎಂಬುದಾಗಿ ನೋಡಲ್ ಅಧಿಕಾರಿಗಳು ತಿಳಿಸಿದರು.

ತರಬೇತಿ ಅವಧಿಯಲ್ಲಿ ಅರ್ಥಶಾಸ್ತ್ರ, ಭೌಗೋಳ ಶಾಸ್ತ್ರ, ಪರಿಸರ ಅಧ್ಯಯನ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾನಸಿಕ ಸಾಮಥ್ರ್ಯ, ಭಾರತ ಸಂವಿಧಾನ, ಇತಿಹಾಸ ಸೇರಿದಂತೆ ಹಲವು ವಿಷಯಗಳ ಪಾಠ ಬೋಧನೆಯ ಬಗ್ಗೆ ನಿರ್ಣಯಿಸಲಾಯಿತು. 30 ದಿನಗಳ ತರಬೇತಿ ಅವಧಿಯಲ್ಲಿ ಪಾಠ ಮಾಡಲು ಪರಿಣಿತ ಸಂಪನ್ಮೂಲ ವ್ಯಕ್ತಿಗಳಾದ ಅಜಿತ್ ಬೆಂಗಳೂರು, ಧ್ರುವಕುಮಾರ್ ಬೆಂಗಳೂರು, ರವಿ ನಾಯ್ಕಲ್ ಬೆಂಗಳೂರು, ಮಲ್ಲಿ ಸ್ವಾಮಿ ರಾಯಚೂರು, ಶರಣ ಬಾಗೂರು ಧಾರವಾಡ, ಅಮರೇಶ ಪೋತ್ನಾಳ್ ರಾಯಚೂರು ಸೇರಿದಂತೆ ಇನ್ನೀತರರನ್ನು ಕರೆಯಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಈ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ತರಬೇತಿ ಶಿಬಿರವು ಯುವಜನರಿಗಾಗಿ ನಗರ, ನಗರಕ್ಕಾಗಿ ಯುವಕರು ಎಂಬ ಅಭಿಯಾನದಡಿ ನಡೆಯಲಿದ್ದು, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರ ಮಾರ್ಗದರ್ಶನ ಮತ್ತು ಸಹಾಯಕ ಆಯುಕ್ತರಾದ ಗಜಾನನ ಬಾಳೆ ಅವರ ಮೇಲುಸ್ತುವಾರಿಯಲ್ಲಿ ನಡೆಯಲಿದೆ ಎಂದು ಈ ಕಾರ್ಯಕ್ರಮದ ನೋಡಲ್ ಅಧಿಕಾರಿಗಳು ಸಭೆಗೆ ವಿವರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande