
ವಿಜಯಪುರ, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ ಟಿವಿ9 ಜಿಲ್ಲಾ ವರದಿಗಾರ ಅಶೋಕ ಯಡಳ್ಳಿ ಪರವಾಗಿ ಭರ್ಜರಿ ಪ್ರಚಾರ ನಡೆಸಲಾಯಿತು.
ನಗರದ ಜಿಲ್ಲಾ ಪಂಚಾಯತ ರಸ್ತೆ ಪಕ್ಕದಲ್ಲಿರುವ ಪಂಚಮುಖಿ ದೇವಸ್ಥಾನದಲ್ಲಿ ಹಿರಿಯ ಪತ್ರಕರ್ತರೊಂದಿಗೆ ಪ್ರಚಾರ ಪತ್ರಗಳಿಗೆ ಪೂಜೆ ಸಲ್ಲಿಸಿದ ಅಭ್ಯರ್ಥಿ ಅಶೋಕ ಯಡಳ್ಳಿ ಪ್ರಚಾರ ಕಾರ್ಯ ಕೈಗೊಂಡರು.
ಹಿರಿಯ ಪತ್ರಕರ್ತರಾದ ವಾಸುದೇವ ಹೆರಕಲ್ಲ, ಗೋಪಾಲ ನಾಯಕ, ಸುಶಿಲೇಂದ್ರ ನಾಯಕ ಸೇರಿದಂತೆ ಹಲವರಿಗೆ ಕರಪತ್ರಗಳನ್ನು ನೀಡಿ ಮತ ನೀಡುವಂತೆ ಅಭ್ಯರ್ಥಿ ಅಶೋಕ ಯಡಳ್ಳಿ ಮನವಿ ಮಾಡಿದರು.
ಈ ವೇಳೆ ಪತ್ರಕರ್ತರಾದ ಮೋಹನ ಕುಲಕರ್ಣಿ, ಕೆ.ಕೆ.ಕುಲಕರ್ಣಿ, ಇಂದುಶೇಖರ ಮಣೂರ, ಶರಣು ಮಸಳಿ, ಚಿದಂಬರ ಕುಲಕರ್ಣಿ, ಪವನ ಕುಲಕರ್ಣಿ, ಗೋಪಾಲ ಕಣ್ಣಿಮಣಿ, ರಾಹುಲ ಆಪ್ಟೆ, ಗುರುರಾಜ ಗದ್ದನಕೇರಿ, ಶಶಿಕಾಂತ ಮೆಂಡೆಗಾರ ಇದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande