ಯಶವಂತಪುರ ಕೋಚಿಂಗ್ ಡಿಪೋ ಪರಿಶೀಲಿಸಿದ ಕೇಂದ್ರ ಸಚಿವ ವಿ.ಸೋಮಣ್ಣ
ಬೆಂಗಳೂರು, 30 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಬೆಂಗಳೂರಿನ ಯಶವಂತಪುರ ಕೋಚಿಂಗ್ ಡಿಪೋಗೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ಕೋಚ್ ನಿರ್ವಹಣಾ ಚಟುವಟಿಕೆಗಳು ಹಾಗೂ ಸ್ವಚ್ಛತಾ ಕ್ರಮಗಳನ್ನು ಪರಿಶೀಲಿಸಿದರು. ಡಿಪೋದಲ್ಲಿ ಲಭ್ಯವಿರುವ
Inspection


ಬೆಂಗಳೂರು, 30 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಬೆಂಗಳೂರಿನ ಯಶವಂತಪುರ ಕೋಚಿಂಗ್ ಡಿಪೋಗೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ಕೋಚ್ ನಿರ್ವಹಣಾ ಚಟುವಟಿಕೆಗಳು ಹಾಗೂ ಸ್ವಚ್ಛತಾ ಕ್ರಮಗಳನ್ನು ಪರಿಶೀಲಿಸಿದರು.

ಡಿಪೋದಲ್ಲಿ ಲಭ್ಯವಿರುವ ಸೌಲಭ್ಯಗಳು, ಕೋಚ್‌ಗಳ ದುರಸ್ತಿ ಮತ್ತು ನಿರ್ವಹಣೆಯ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಚಿವರು, ಕಾರ್ಯನಿರ್ವಹಣೆಯ ಶಿಸ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನೈರುತ್ಯ ರೈಲ್ವೆಯ ಪ್ರಮುಖ ಘಟಕವಾಗಿರುವ ಈ ಕೋಚಿಂಗ್ ಡಿಪೋದಲ್ಲಿ ಒಟ್ಟು 41 ರೇಕ್‌ಗಳು ಹಾಗೂ 909 ಕೋಚ್‌ಗಳ ನಿರ್ವಹಣೆ ನಡೆಯುತ್ತಿದ್ದು, ಐಸಿಎಫ್ ಮತ್ತು ಎಲ್‌ಎಚ್‌ಬಿ ಕೋಚ್‌ಗಳ ಇಂಟರ್ ಮೀಡಿಯೇಟ್ ಓವರ್‌ಹಾಲಿಂಗ್ ಸಹ ಇಲ್ಲಿ ನಡೆಯುತ್ತದೆ.

ಸ್ವಚ್ಛತಾ ಅಭಿಯಾನದ ಅಂಗವಾಗಿ “ತ್ಯಾಜ್ಯದಿಂದ ಕಲೆ” ಉಪಕ್ರಮದಡಿ ನಿರ್ಮಿಸಲಾದ 11 ಅಡಿ ಎತ್ತರವಿರುವ ಕುದುರೆಯ ಶಿಲ್ಪವನ್ನು ಸಚಿವರು ವೀಕ್ಷಿಸಿದರು. ನಟ್, ಬೋಲ್ಟ್, ವಾಷರ್, ಲೋಹದ ಹಗ್ಗ ಹಾಗೂ ಸ್ಪ್ರಿಂಗ್‌ಗಳಿಂದ ನಿರ್ಮಿಸಿದ ಈ ಶಿಲ್ಪವನ್ನು ಸಿಬ್ಬಂದಿಯ ಸೃಜನಶೀಲತೆಯ ಪ್ರತೀಕವೆಂದು ಅವರು ಶ್ಲಾಘಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಣ್ಣ, ಅಕ್ಟೋಬರ್ 2ರಿಂದ 31ರವರೆಗೆ ಭಾರತೀಯ ರೈಲ್ವೆಯಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ಜಾರಿಯಲ್ಲಿದೆ. ನಿಲ್ದಾಣಗಳು, ಕೋಚಿಂಗ್ ಡಿಪೋಗಳು ಹಾಗೂ ರೈಲುಗಳಲ್ಲಿ ಸ್ವಚ್ಛತೆಯನ್ನು ಖಚಿತಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶ,” ಎಂದು ಹೇಳಿದರು.

ಪ್ರಯಾಣಿಕರಿಗೆ ಸುರಕ್ಷಿತ, ಸ್ವಚ್ಛ ಹಾಗೂ ಆರಾಮದಾಯಕ ಪ್ರಯಾಣ ಒದಗಿಸಲು ಶ್ರಮಿಸುತ್ತಿರುವ ಡಿಪೋ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್ ಕುಮಾರ್ ಸಿಂಗ್, ಅಪರ ವ್ಯವಸ್ಥಾಪಕರು ಪರೀಕ್ಷಿತ್ ಮೋಹನ್‌ಪೂರಿಯಾ ಮತ್ತು ಪ್ರವೀಣ್ ಕಾತರಕಿ, ಹಿರಿಯ ಕೋಚಿಂಗ್ ಅಧಿಕಾರಿ ಧರ್ಮೇಂದ್ರ ಸೀರ್ವಿ, ಹಿರಿಯ ಯಾಂತ್ರಿಕ ಇಂಜಿನಿಯರ್ ಹಾಗೂ ಪರಿಸರ ಮತ್ತು ಹೌಸ್‌ಕೀಪಿಂಗ್ ವ್ಯವಸ್ಥಾಪಕ ಅನುರಾಗ್ ಸಿಂಗ್ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande