ಕಲೆಗಳ ಜೀವಂತಿಕೆಗೆ ಯುವ ಸಮೂಹ ಸದೃಢಗೊಳಿಸಿ : ಅರುಣ ಮಾಚಯ್ಯ
ಹಾಸನ, 30 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ನಮ್ಮ ನಾಡು ನುಡಿ ಸಂಸ್ಕೃತಿ ಆಚಾರ, ವಿಚಾರ, ಜಾನಪದ, ಸಂಪ್ರದಾಯಗಳ ನ್ನು ಬಿಂಬಿಸುವ ಕಲೆಗಳನ್ನು ಜೀವಂತವಾಗಿ ಉಳಿಸಲು ಯುವ ಸಮೂಹವನ್ನು ಸದೃಢಗೊಳಿಸುವುದು ಅಗತ್ಯವಿದೆ ಎಂದು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ ಮಾಚಯ್ಯ ತಿಳಿಸಿದ್ದಾರೆ. ಹಾಸನ
Youth fest


ಹಾಸನ, 30 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ನಮ್ಮ ನಾಡು ನುಡಿ ಸಂಸ್ಕೃತಿ ಆಚಾರ, ವಿಚಾರ, ಜಾನಪದ, ಸಂಪ್ರದಾಯಗಳ ನ್ನು ಬಿಂಬಿಸುವ ಕಲೆಗಳನ್ನು ಜೀವಂತವಾಗಿ ಉಳಿಸಲು ಯುವ ಸಮೂಹವನ್ನು ಸದೃಢಗೊಳಿಸುವುದು ಅಗತ್ಯವಿದೆ ಎಂದು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ ಮಾಚಯ್ಯ ತಿಳಿಸಿದ್ದಾರೆ.

ಹಾಸನ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಮೇರಾ ಯುವ ಭಾರತ್ ಸಹಯೋಗದಲ್ಲಿಂದು ಹಾಸನಾಂಬ ಕಲಾ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬಹುದೊಡ್ಡ ಮಾನವ ಸಂಪನ್ಮೂಲ ಹೊಂದಿರುವ ನಮ್ಮ ದೇಶದಲ್ಲಿ ಶೇ.62 ರಷ್ಟು 40 ವರ್ಷದೊಳಗಿನ ಯುವ ಜನತೆ ಹೊಂದಿರುವುದು ಹೆಮ್ಮೆ ವಿಷಯ ಎಂದು ತಿಳಿಸಿದರು.

ನಮ್ಮ ದೇಶ ಪ್ರಪಂಚದ ನಾನಾ ರಾಷ್ಟ್ರಗಳಿಗೆ ಮಾನವ ಸಂಪನ್ಮೂಲ ರಪ್ತು ಮಾಡುವ ಸ್ಥಿತಿಯಲ್ಲಿರುವುದು ಸಂತೋಷ ತರುತ್ತದೆ ಎಂದರು. ಭಾರತೀಯರು ಎಲ್ಲಾ ರಂಗಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.ಯುವ ಜನತೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ಪ್ರಜ್ವಲಿಸಿ ಎಂದು ಶುಭ ಹಾರೈಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹೆಚ್.ಎಲ್.ಮಲ್ಲೇಶ್ ಗೌಡ ಅವರು ಮಾತನಾಡಿ ಯುವ ಜನತೆಯ ಮೂಲಕ ದೇಶವನ್ನು ಎತ್ತರದ ಸ್ಥಾನದಲ್ಲಿ ಕಲ್ಪಿಸಿಕೊಳ್ಳುತ್ತದ್ದೇವೆ ಈ ನಿಟ್ಟಿನಲ್ಲಿ ಯುವ ಜನತೆ ಪ್ರಾಮಾಣಿಕ ಪ್ರಯತ್ನ ಮಾಡಿದರೆ ವಿಶ್ವ ಆಳಾಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯುವ ಜನತೆ ತಮ್ಮಲ್ಲಿರುವ ಪ್ರತಿಭೆಯನ್ನು ಸಕಾರಾತ್ಮಕ ವಾಗಿ ನಿರ್ದಿಷ್ಟ ಮಾರ್ಗದಲ್ಲಿ ವಿನಿಯೋಗಿಸಿದರೆ ವಿಶ್ವ ಮಟ್ಟದಲ್ಲಿ ಬೆಳಗಬಹುವುದು. ಯುವ ಜನತೆ ಅಮುಲ್ಯವಾದ ಸಮಯವನ್ನು ಅನಗತ್ಯವಾಗಿ ಟಿವಿ ವೀಕ್ಷಣೆ, ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಾ ತಮ್ಮಲ್ಲಿರುವ ಪ್ರತಿಭೆ ವ್ಯರ್ಥ ವಾಗುತ್ತಿದೆ ಭವಿಷ್ಯದ ಭಾರತದ ಬಗ್ಗೆ ಆತಂಕ ಕಾಡುತ್ತಿದೆ ಎಂದರು.

ತಮ್ಮನ್ನು ಗಟ್ಟಿಗೊಳಿಸಿಗೊಂಡು ದೇಶ ಕಟ್ಟಲು ಮುಂದಾಗಬೇಕು ಎಂದರಲ್ಲದೆ, ತಮ್ಮ ಕುಟುಂಬ ಮತ್ತು ಗ್ರಾಮವನ್ನು ಪ್ರೀತಿಸುವುದರ ಮೂಲಕ ದೇಶ ಪ್ರೀತಿಯ ಕಡೆಗೆ ಸಾಗಲಿ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande