ಲಕ್ಷ್ಮೇಶ್ವರ ಪಟ್ಟಣದಲ್ಲಿ ಸರಣಿ ಕಳ್ಳತನ
ಗದಗ, 30 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ನಾಕಾ ಹತ್ತಿರ ಮೂರು ಅಂಗಡಿಗಳು ಹಾಗೂ ಲಕ್ಷ್ಮೀ ನಗರದ ಒಂದು ಮನೆಯ ಕೀಲಿ ಮುರಿದು ಕಳ್ಳತನ ಮಾಡಿರುವ ಘಟನೆಯಿಂದ ಜನತೆ ಬೆಚ್ಚಿ ಬಿದ್ದಿದ್ದಾರೆ. ಶಿಗ್ಲಿ ನಾಕಾ ಬಳಿ ಇರುವ ಝರಾಕ್ಸ್ ಅಂಗಡಿ, ಅದರ ಪಕ್ಕದಲ್ಲಿ ಮಿಶ್ರ
ಫೋಟೋ


ಗದಗ, 30 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ನಾಕಾ ಹತ್ತಿರ ಮೂರು ಅಂಗಡಿಗಳು ಹಾಗೂ ಲಕ್ಷ್ಮೀ ನಗರದ ಒಂದು ಮನೆಯ ಕೀಲಿ ಮುರಿದು ಕಳ್ಳತನ ಮಾಡಿರುವ ಘಟನೆಯಿಂದ ಜನತೆ ಬೆಚ್ಚಿ ಬಿದ್ದಿದ್ದಾರೆ.

ಶಿಗ್ಲಿ ನಾಕಾ ಬಳಿ ಇರುವ ಝರಾಕ್ಸ್ ಅಂಗಡಿ, ಅದರ ಪಕ್ಕದಲ್ಲಿ ಮಿಶ್ರಾ ಪೇಡಾ ಅಂಗಡಿ ಹಾಗೂ ಅದೇ ಸಾಲಿನಲ್ಲಿರುವ ಸ್ಟೇಷನರಿ ಅಂಗಡಿ ಇವುಗಳ ಮೇಲಿನ ತಗಡಿನ ಶೀಟ್‌ಗಳನ್ನು ಕತ್ತರಿಸಿ ಒಳಗಡೆ ಇಳಿದು ಈ ಕೃತ್ಯ ನಡೆಸಿದ್ದು, ಅಂಗಡಿಯಲ್ಲಿದ್ದ ಗಲ್ಲಾ ಪೆಟ್ಟಿಗೆಯಲ್ಲಿನ ಹಣ ಮತ್ತು ಇನ್ನಿತರ ಕೆಲವು ವಸ್ತುಗಳನ್ನು ಎತ್ತಿಕೊಂಡು ಹೋಗಿದ್ದಾರೆ.

ಬೇಕರಿ ಅಂಗಡಿಗೂ ತಗಡಿನ ಶೀಟ್ ಕತ್ತರಿಸುವ ಪ್ರಯತ್ನ ಮಾಡಿದ್ದು, ಯಾವುದೋ ಕಾರಣಕ್ಕೆ ಬಿಟ್ಟು ಹೋಗಿದ್ದಾರೆ. ಅದೇ ವೇಳೆ ಲಕ್ಷ್ಮೀನಗರದಲ್ಲಿಯೂ ಒಂದು ಮನೆಯ ಬಾಗಿಲು ಮುರಿದು ಮನೆಯಲ್ಲಿನ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿದ್ದಾರೆಂದು ತಿಳಿದು ಬಂದಿದೆ.

ಈ ಕುರಿತಂತೆ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ ಗಡಾದ, ಕ್ರೈಂ ವಿಭಾಗದ ಪಿಎಸ್‌ಐ ಟಿ.ಕೆ. ರಾಠೋಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳತನದ ದೃಶ್ಯವನ್ನು ಎಲ್ಲ ಅಂಗಡಿಗಳಲ್ಲಿಯ ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ನಡೆಸಿ, ಸಂಬಂಧಿಸಿದ ವಿಡಿಯೋ ತುಣುಕುಗಳನ್ನು ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ. ಝರಾಕ್ಸ್ ಅಂಗಡಿಯಲ್ಲಿ, ಮಿಶ್ರಾ ಪೇಡಾ ಅಂಗಡಿಯಲ್ಲಿ ಹಾಗೂ ಸ್ಟೇಷನರಿ ಅಂಡಿಯಲ್ಲಿನ ಗಲ್ಲಾ ಪೆಟ್ಟಿಗೆಯಲ್ಲಿ ಹಣವನ್ನು ಹಾಗೂ ಸಿಹಿ ತಿಂಡಿಗಳನ್ನು, ಕೆಲವು ಅಲಂಕಾರಿಕ ವಸ್ತುಗಳನ್ನು ದೋಚಿದ್ದಾರೆಂದು ತಿಳಿದು ಬಂದಿದೆ.

ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande