
ಬೆಂಗಳೂರು, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿ ರಾಜ್ಯ ಸರ್ಕಾರ ಪ್ರಕಟಿಸಿದೆ. ಮೊದಲ ಬಾರಿಗೆ ಅರ್ಜಿ ಆಹ್ವಾನಿಸದೆ, ವಿವಿಧ ವಲಯಗಳಿಂದ ಒಟ್ಟು 70 ಮಂದಿ ಪ್ರತಿಭಾವಂತರನ್ನು ಆಯ್ಕೆ ಮಾಡಲಾಗಿದೆ.
ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ , “ಜಿಲ್ಲಾವಾರು ಮತ್ತು ಸಾಮಾಜಿಕ ಪರಿಪಾಲನೆಯ ಆಧಾರದಲ್ಲಿ ಪ್ರಶಸ್ತಿ ಆಯ್ಕೆ ಮಾಡಲಾಗಿದೆ. ಸಲಹಾ ಸಮಿತಿಯು ನಾಲ್ಕೈದು ಬಾರಿ ಸಭೆ ನಡೆಸಿ ಅರ್ಹರನ್ನು ಶಿಫಾರಸು ಮಾಡಿದೆ. ಈ ಬಾರಿ ಯಾವುದೇ ಸಂಘ–ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ,” ಎಂದು ತಿಳಿಸಿದರು.
ಈ ಬಾರಿ 12 ಮಹಿಳೆಯರು, ಸೇರಿದಂತೆ ಸಮಗಾರ ಹರಳಯ್ಯ ಸಮುದಾಯದ ಇಬ್ಬರು ಪ್ರತಿಭೆಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇದು ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರತಿ ಪುರಸ್ಕೃತರಿಗೆ 25 ಗ್ರಾಂ ಚಿನ್ನದ ಪದಕ ಹಾಗೂ ₹5 ಲಕ್ಷ ನಗದು ನೀಡಲಾಗುವುದು. ನವೆಂಬರ್ 1ರಂದು ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಮುಖ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ..
ಸಾಹಿತ್ಯ: ಪ್ರೊ. ರಾಜೇಂದ್ರ ಚೆನ್ನಿ, ರಹಮತ್ ತರೀಕೆರೆ, ಹ.ಮ. ಪೂಜಾರ ಸೇರಿದಂತೆ ಆರು ಮಂದಿ
ಜಾನಪದ: ಬಸಪ್ಪ ಚೌಡ್ಕಿ, ಸಿಂಧು ಗುಜರನ್ ಸೇರಿದಂತೆ ಎಂಟು ಮಂದಿ
ಸಂಗೀತ / ನೃತ್ಯ: ದೇವೇಂದ್ರಕುಮಾರ ಪತ್ತಾರ್, ಮಡಿವಾಳಯ್ಯ ಸಾಲಿ, ಪ್ರೊ. ಕೆ.ರಾಮಮೂರ್ತಿ ರಾವ್
ಚಲನಚಿತ್ರ: ನಟ ಪ್ರಕಾಶ್ ರಾಜ್, ವಿಜಯಲಕ್ಷ್ಮೀ ಸಿಂಗ್
ಆಡಳಿತ / ವೈದ್ಯಕೀಯ: ಹೆಚ್. ಸಿದ್ದಯ್ಯ, ಡಾ. ಆಲಮ್ಮ ಮಾರಣ್ಣ, ಡಾ. ಜಯರಂಗನಾಥ್
ಸಮಾಜಸೇವೆ: ಸೂಲಗಿತ್ತಿ ಈರಮ್ಮ, ಫಕ್ಕೀರಿ, ಕೋಣಂದೂರು ಲಿಂಗಪ್ಪ
ಮಾಧ್ಯಮ: ಕೆ. ಸುಬ್ರಮಣ್ಯ, ಅಂಶಿ ಪ್ರಸನ್ನಕುಮಾರ್, ಬಿ.ಎಂ. ಹನೀಫ್, ಎಂ. ಸಿದ್ಧರಾಜು
ಕ್ರೀಡೆ: ಆಶೀಶ್ ಕುಮಾರ್ ಬಲ್ಲಾಳ್, ಎಂ. ಯೋಗೇಂದ್ರ, ಡಾ. ಬಬಿನಾ ಎನ್.ಎಂ
ಶಿಕ್ಷಣ: ಡಾ. ಎಂ.ಆರ್. ಜಯರಾಮ್, ಡಾ. ಎನ್.ಎಸ್. ರಾಮೇಗೌಡ
ಯಕ್ಷಗಾನ / ರಂಗಭೂಮಿ: ಕೋಟ ಸುರೇಶ್ ಬಂಗೇರ, ಮೈಮ್ ರಮೇಶ್, ಕೆ.ಪಿ. ಹೆಗಡೆ
ವಿಜ್ಞಾನ / ತಂತ್ರಜ್ಞಾನ: ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್, ಡಾ. ಆರ್.ವಿ. ನಾಡಗೌಡ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa