ಸಾವಿನಲ್ಲೂ ಹಣ ವಸೂಲಿ ಮಾಡಿದ ಪೋಲಿಸ ಸಿಬ್ಬಂದಿ ಅಮಾನತು
ಬೆಂಗಳೂರು, 30 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮೃತ ಮಗಳ ಶವ ಪರೀಕ್ಷೆ ಮಾಡಿಸಲು ಹಣ ವಸೂಲಿ ಮಾಡಿದ ಅಮಾನುಷ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಗಳ ಸಾವಿನ ದುಃಖದಲ್ಲಿದ್ದ ತಂದೆಯಿಂದ ಪೊಲೀಸರು ಲಂಚ ಪಡೆದ ವಿಷಯ ಬಹಿರಂಗವಾದ ನಂತರ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಭಾರ
Suspended


ಬೆಂಗಳೂರು, 30 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮೃತ ಮಗಳ ಶವ ಪರೀಕ್ಷೆ ಮಾಡಿಸಲು ಹಣ ವಸೂಲಿ ಮಾಡಿದ ಅಮಾನುಷ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಗಳ ಸಾವಿನ ದುಃಖದಲ್ಲಿದ್ದ ತಂದೆಯಿಂದ ಪೊಲೀಸರು ಲಂಚ ಪಡೆದ ವಿಷಯ ಬಹಿರಂಗವಾದ ನಂತರ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ನಿವೃತ್ತ ಸಿಎಫ್‌ಒ ಶಿವಕುಮಾರ್ ಅವರ ಮಗಳು ಅಕ್ಷಯ (26) ಸೆಪ್ಟೆಂಬರ್ 18ರಂದು ಮಿದುಳು ರಕ್ತಸ್ರಾವದಿಂದ ಮೃತಪಟ್ಟಿದ್ದರು. ಈ ವಿಷಯ ತಿಳಿದು ತಂದೆ-ತಾಯಿ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದರು.

ಅಂಬುಲೆನ್ಸ್ ಮೂಲಕ ಕಸುವಿನಹಳ್ಳಿಯಿಂದ ಕೋರಮಂಗಲ ಆಸ್ಪತ್ರೆಗೆ ಶವ ಸಾಗಿಸಲು ನಿಗದಿತ 5 ಸಾವಿರ ರೂ. ಬದಲಿಗೆ ಚಾಲಕ ಹೆಚ್ಚುವರಿ 2 ಸಾವಿರ ರೂ. ವಸೂಲಿ ಮಾಡಿದ ಘಟನೆ ಮೊದಲ ಹಂತದಲ್ಲೇ ಕಳವಳ ಮೂಡಿಸಿತ್ತು.

ಮರಣೋತ್ತರ ಪರೀಕ್ಷೆ ವೇಳೆ ಪೊಲೀಸರೂ ಸಹ ಹಣಕ್ಕಾಗಿ ಒತ್ತಾಯಿಸಿದ್ದು, ನಂತರ ಶಿವಕುಮಾರ್ ಅವರ ಸ್ನೇಹಿತ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು ಎಂದು ತಿಳಿದುಬಂದಿದೆ.

ಮಗಳ ಕಣ್ಣು ದಾನ ಮಾಡಿದ ನಂತರ ಶಿವಕುಮಾರ್ ಸ್ಮಶಾನದಲ್ಲೂ ಹಣ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಬಳಿಕ ಪೊಲೀಸ್ ಠಾಣೆಯಲ್ಲಿ UDR ಕಾಪಿ ಪಡೆಯಲು 5 ಸಾವಿರ ರೂ. ಮತ್ತು ಮರಣ ಪ್ರಮಾಣ ಪತ್ರಕ್ಕಾಗಿ ಮತ್ತೊಂದು 2 ಸಾವಿರ ರೂ. ಲಂಚ ನೀಡಿದ್ದಾರೆ.

ಈ ಎಲ್ಲ ಘಟನೆಗಳಿಂದ ಬೇಸತ್ತ ಶಿವಕುಮಾರ್ ಅವರು ತಮ್ಮ ನೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, “ನನ್ನಲ್ಲಿ ಹಣವಿತ್ತು, ಹಾಗಾಗಿ ಪಾವತಿಸಿದೆ. ಆದರೆ ಬಡವರು ಏನು ಮಾಡುತ್ತಾರೆ?” ಎಂದು ಪ್ರಶ್ನೆ ಎತ್ತಿದ್ದರು.

ಅವರ ಈ ಪೋಸ್ಟ್ ವೈರಲ್ ಆಗಿದ್ದು, ವಿಷಯ ತಿಳಿದು ವೈಟ್‌ಫೀಲ್ಡ್ ಡಿಸಿಪಿ ಪರಶುರಾಮ್ ಸಬ್ ಇನ್ಸ್ಪೆಕ್ಟರ್ ಸಂತೋಷ್ ಹಾಗೂ ಕಾನ್‌ಸ್ಟೇಬಲ್ ಗೋರಖನಾಥ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಪೊಲೀಸರ ಹಣದ ವಸೂಲಿಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯಲ್ಲಿ ಆರೋಪಗಳು ದೃಢಪಟ್ಟಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಸಾವಿನಲ್ಲೂ ಹಣ ವಸೂಲಿಗೆ ಮುಂದಾದ ಸಿಬ್ಬಂದಿ ಪೋಲಿಸ್ ಇಲಾಖೆ ಗೌರವಕ್ಕೆ ಚುತಿ ತಂದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande