
ಧಾರವಾಡ, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಎಲ್‌ಓಟಿ (ಲೆಫ್ಟ್ ಬಂಡಲ್ ಬ್ರಾಂಚ್ ಆಪ್ಟಿಮೈಸ್ಡ್ ಥೆರಪಿ) ಸಿಆರ್‌ಟಿ-ಡಿ ಜೊತೆಗೆ ಕಂಡಕ್ಷನ್ ಸಿಸ್ಟಮ್ ಪೇಸಿಂಗ್ (ಸಿಎಸ್‌ಪಿ) ಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿ ಹೃದಯ ಚಿಕಿತ್ಸೆಯಲ್ಲಿ ಮಹತ್ತರ ಸಾಧನೆ ಮಾಡಿದ ಹೆಗ್ಗಳಿಕೆ ಧಾರವಾಡ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ಗೆ ಲಭಿಸಿದೆ.
50 ವರ್ಷದ ಪುರುಷ ರೋಗಿಯೊಬ್ಬರ ಹೃದಯ ವೈಫಲ್ಯ, ಡೈಲೇಟೆಡ್ ಕಾರ್ಡಿಯೋಮಯೋಪತಿ ಮತ್ತು ಲೆಫ್ಟ್ ಬಂಡಲ್ ಬ್ರಾಂಚ್ ಬ್ಲಾಕ್ ಸಮಸ್ಯೆಗೆ ಡಾ. ರಘುಪ್ರಸಾದ್ ಎಸ್ ಅವರ ನೇತೃತ್ವದ ತಂಡ ಈ ಸುಧಾರಿತ ಚಿಕಿತ್ಸೆಯನ್ನು ನೆರವೇರಿಸಿ ರೋಗಿಯನ್ನು ಸಂಪೂರ್ಣ ಚೇತರಿಸಿಕೊಂಡು ಮನೆಗೆ ಕಳುಹಿಸಿದೆ.
ಎಲ್‌ಓಟಿ ಸಿಆರ್‌ಟಿ-ಡಿ ಜೊತೆಗೆ ಸಿಎಸ್‌ಪಿ ಹೃದಯದ ನೈಸರ್ಗಿಕ ಕಂಡಕ್ಷನ್ ಮಾರ್ಗದ ಮೂಲಕ ಪೇಸಿಂಗ್ ಮಾಡುವ ಹೊಸ ತಂತ್ರಜ್ಞಾನವಾಗಿದ್ದು, ಸಾಂಪ್ರದಾಯಿಕ ಚಿಕಿತ್ಸೆಯಿಗಿಂತ ಉತ್ತಮ ಸಿಂಕ್ರೊನಿ ಮತ್ತು ತ್ವರಿತ ಚೇತರಿಕೆಯನ್ನು ಒದಗಿಸುತ್ತದೆ.
ಹಿರಿಯ ಚಿಕಿತ್ಸಕ ಡಾ. ರಘುಪ್ರಸಾದ್ ಅವರು “ಈ ಚಿಕಿತ್ಸೆ ಹೃದಯ ವೈಫಲ್ಯಕ್ಕೆ ಹೊಸ ಆಶಾಕಿರಣ” ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa