ಪುರಸಭೆ ನೇಮಕಾತಿ ಹಗರಣ : ಕೋಲ್ಕತ್ತಾದ ಹಲವೆಡೆ ಇಡಿ ದಾಳಿ
ಕೋಲ್ಕತ್ತಾ, 28 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪುರಸಭೆ ನೇಮಕಾತಿ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆ ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ ಇಂದು ಬೆಳಿಗ್ಗೆ ಕೋಲ್ಕತ್ತಾದ ಅನೇಕ ಪ್ರದೇಶಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಮೂಲಗಳ ಪ್ರಕಾರ, ಇಡಿ ಅಧಿಕಾರಿಗಳು ಬೆಳಿಗ್ಗೆ 7 ಗಂಟೆ ಸುಮ
ಪುರಸಭೆ ನೇಮಕಾತಿ ಹಗರಣ : ಕೋಲ್ಕತ್ತಾದ ಹಲವೆಡೆ ಇಡಿ ದಾಳಿ


ಕೋಲ್ಕತ್ತಾ, 28 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪುರಸಭೆ ನೇಮಕಾತಿ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆ ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ ಇಂದು ಬೆಳಿಗ್ಗೆ ಕೋಲ್ಕತ್ತಾದ ಅನೇಕ ಪ್ರದೇಶಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ಮೂಲಗಳ ಪ್ರಕಾರ, ಇಡಿ ಅಧಿಕಾರಿಗಳು ಬೆಳಿಗ್ಗೆ 7 ಗಂಟೆ ಸುಮಾರಿಗೆ ಬೆಲೆಘಾಟಾದ ಹೇಮಚಂದ್ರ ನಾಸ್ಕರ್ ರಸ್ತೆಯಲ್ಲಿರುವ ಜವಳಿ ಉದ್ಯಮಿ ಲಕ್ಷ್ಮಿ ರಾಮಲಯ ಅವರ ನಿವಾಸದಲ್ಲಿ, ಆರು ಸದಸ್ಯರ ತಂಡ ಶೋಧ ನಡೆಸಿದೆ. ಇದರ ಜೊತೆಗೆ ಬೆಂಟಿಂಕ್ ಸ್ಟ್ರೀಟ್ ಹಾಗೂ ಪಾರ್ಕ್ ಸ್ಟ್ರೀಟ್ ಪ್ರದೇಶಗಳಲ್ಲಿಯೂ ಶೋಧ ಮುಂದುವರೆದಿದೆ.

ಈ ದಾಳಿಗಳು ಪುರಸಭೆ ನೇಮಕಾತಿಯಲ್ಲಿನ ಅಕ್ರಮ ಹಣ ವ್ಯವಹಾರ ಮತ್ತು ಲಂಚದ ಆರೋಪಗಳ ತನಿಖೆಯ ಭಾಗವಾಗಿದ್ದು, ಇಡಿ ಅಧಿಕಾರಿಗಳು ಮಹತ್ವದ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಹಿಂದೆ ಇಡಿ ರಾಜ್ಯ ಸಚಿವ ಸುಜಿತ್ ಬೋಸ್ ಅವರ ಆಪ್ತರ ಕಚೇರಿ ಮತ್ತು ಮನೆಗಳ ಮೇಲೂ ಶೋಧ ನಡೆಸಿತ್ತು. ಪ್ರಾಥಮಿಕ ತನಿಖೆಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ದೊಡ್ಡ ಮೊತ್ತದ ಹಣ ಲಂಚವಾಗಿ ನೀಡಿದ್ದರು ಎಂಬ ಮಾಹಿತಿ ಹೊರ ಬಂದಿದೆ.

ತನಿಖಾ ಮೂಲಗಳ ಪ್ರಕಾರ, ಇಡಿಯ ಶೋಧ ಮುಂದಿನ ಕೆಲವು ದಿನಗಳಲ್ಲಿ ಇನ್ನೂ ಹಲವು ಪ್ರದೇಶಗಳಿಗೆ ವಿಸ್ತರಿಸಲಿದ್ದು, ಪುರಸಭೆ ಮತ್ತು ನಗರ ನಿಗಮಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಸಂಗ್ರಹಿಸುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಶಿಕ್ಷಕರ ನೇಮಕಾತಿ ಹಗರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ, ಪುರಸಭೆ ನೇಮಕಾತಿಯಲ್ಲಿಯೂ ಇದೇ ರೀತಿಯ ಭ್ರಷ್ಟಾಚಾರದ ಮಾದರಿ ಬೆಳಕಿಗೆ ಬಂದಿರುವುದು ರಾಜ್ಯದ ಆಡಳಿತಕ್ಕೆ ಹೊಸ ಸವಾಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande