
ನವದೆಹಲಿ, 28 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ನೌಕಾಪಡೆಯ ಆತಿಥ್ಯದಲ್ಲಿ ನವದೆಹಲಿಯ ಮಾಣೆಕ್ಷಾ ಕೇಂದ್ರದಲ್ಲಿ ಇಂಡೋ-ಪೆಸಿಫಿಕ್ ಪ್ರಾದೇಶಿಕ ಸಂವಾದ ಮಂಗಳವಾರ ಆರಂಭಗೊಂಡಿದೆ. ರಾಷ್ಟ್ರೀಯ ಸಾಗರ ಪ್ರತಿಷ್ಠಾನ ಸಹಯೋಗದಲ್ಲಿ ನಡೆಯುತ್ತಿರುವ ಈ ಮೂರು ದಿನಗಳ ಸಮ್ಮೇಳನ ಅ.30ರವರೆಗೆ ನಡೆಯಲಿದೆ.
ಈ ವರ್ಷದ ವಿಷಯ “ಒಳಗೊಂಡಿರುವ ಕಡಲ ಭದ್ರತೆ ಮತ್ತು ಅಭಿವೃದ್ಧಿ” ಆಗಿದ್ದು, ಇಂಡೋ-ಪೆಸಿಫಿಕ್ ಪ್ರದೇಶದ ಭದ್ರತೆ, ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡುತ್ತದೆ. ಭಾರತ ಮತ್ತು ವಿದೇಶಗಳಿಂದ 42 ಮಂದಿ ತಜ್ಞರು ಭಾಗವಹಿಸುತ್ತಿದ್ದಾರೆ.
ಮೂರು ದಿನಗಳಲ್ಲಿ ಆರು ಅಧಿವೇಶನಗಳು ನಡೆಯಲಿದ್ದು, ಹವಾಮಾನ ಬದಲಾವಣೆಯ ಕಡಲ ಭದ್ರತೆ ಮೇಲಿನ ಪರಿಣಾಮ, ನೀಲಿ ಆರ್ಥಿಕತೆ, ಪೂರೈಕೆ ಸರಪಳಿಗಳ ಸ್ಥಿರತೆ ಮತ್ತು ದ್ವಿ-ಬಳಕೆಯ ತಂತ್ರಜ್ಞಾನ ಮುಂತಾದ ವಿಷಯಗಳು ಚರ್ಚೆಗೆ ಬರಲಿವೆ. ಫ್ರಾನ್ಸ್, ಆಸ್ಟ್ರೇಲಿಯಾ, ಶ್ರೀಲಂಕಾ, ವಿಯೆಟ್ನಾಂ ಸೇರಿದಂತೆ ಅನೇಕ ದೇಶಗಳ ಪ್ರತಿನಿಧಿಗಳು ಸಂವಾದದಲ್ಲಿ ಭಾಗಿಯಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa