
ಇಂಫಾಲ್, 26 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಣಿಪುರದ ತೌಬಲ್ ಮತ್ತು ಇಂಫಾಲ್ ಜಿಲ್ಲೆಗಳಲ್ಲಿ ನಡೆದ ಭದ್ರತಾ ಕಾರ್ಯಾಚರಣೆಯಲ್ಲಿ ನಿಷೇಧಿತ ಸಂಘಟನೆಗಳಾದ ಪ್ರಿಪಾಕ , ಕೆಸಿಪಿ ಹಾಗೂ ಕೆವಾಯಕೆಎಲ್ ಗೆ ಸೇರಿದ ನಾಲ್ವರು ಸಕ್ರಿಯ ಉಗ್ರಗಾಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತೌಬಲ್ ಜಿಲ್ಲೆಯ ವಾಂಗ್‌ಜಿಂಗ್ ಪ್ರದೇಶದಲ್ಲಿ ಪ್ರಿಪಾಕ್ ಕಾರ್ಯಕರ್ತರಾದ ಕೆ. ರಾಜ್‌ಕುಮಾರ್ ನೇವಿ ಮೈಟೈ (32) ಹಾಗೂ ಕೆ. ಥೋಂಗಮ್ ರೊನಾಲ್ಡೊ ಸಿಂಗ್ (27) ಅವರನ್ನು ಬಂಧಿಸಿದ್ದು, ಅವರಿಂದ 36 HE ಹ್ಯಾಂಡ್ ಗ್ರೆನೇಡ್ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಂಫಾಲ್ ಪೂರ್ವ ಜಿಲ್ಲೆಯ ಪೊರೊಂಪತ್‌ನಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕೆಸಿಪಿ ಸದಸ್ಯ ಕೆ. ಹುಯಮ್ ರಾಮೇಶ್ವರ್ ಸಿಂಗ್ ಅಲಿಯಾಸ್ ಯೈಮಾ (67) ಬಂಧನಕ್ಕೊಳಗಾಗಿದ್ದಾರೆ. ಇದೇ ವೇಳೆ ಇಂಫಾಲ್ ಪಶ್ಚಿಮದ ಸಿಂಗ್ಜಮೈಯಲ್ಲಿ ಕೆವಾಯಕೆಎಲ್ ಸದಸ್ಯ ಹೇಮರ್ಜಿತ್ ಲೀಶಾಂಗ್ಥೆಮ್ ಅಲಿಯಾಸ್ ಲಾಲು (31) ಬಂಧಿತರಾಗಿದ್ದಾರೆ.
ಪೊಲೀಸರು ಉಗ್ರರಿಂದ ಮೊಬೈಲ್‌ಗಳು, ಆಧಾರ್ ಕಾರ್ಡ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಸುಲಿಗೆ ಮತ್ತು ಅಶಾಂತಿ ಚಟುವಟಿಕೆಗಳನ್ನು ತಡೆಯಲು ಈ ಬಂಧನಗಳು ಮಹತ್ವದ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಜಿಲ್ಲೆಗಳ ಹೊರವಲಯಗಳಲ್ಲಿ ಶೋಧ ಹಾಗೂ ಕಾರ್ಯಾಚರಣೆಗಳು ಮುಂದುವರಿದಿದ್ದು, ರಾಷ್ಟ್ರೀಯ ಹೆದ್ದಾರಿ–37ರಲ್ಲಿ ಅಗತ್ಯ ವಸ್ತು ಸಾಗಾಣಿಕೆಗೆ 129 ವಾಹನಗಳ ಸಂಚಾರ ಭದ್ರಪಡಿಸಲಾಗಿದೆ. 114 ಚೆಕ್‌ಪೋಸ್ಟ್‌ಗಳಲ್ಲಿ ನಿಗಾ ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa