
ನವದೆಹಲಿ, 26 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಐದು ವರ್ಷಗಳ ವಿರಾಮದ ನಂತರ, ಭಾರತ ಮತ್ತು ಚೀನಾ ನಡುವಿನ ನೇರ ವಿಮಾನಗಳು ಇಂದಿನಿದ ಪುನರಾರಂಭಗೊಳ್ಳಲಿವೆ.
ಇಂಡಿಗೋ ಅಕ್ಟೋಬರ್ 26 ರಿಂದ ಕೋಲ್ಕತ್ತಾ-ಗುವಾಂಗ್‌ಝೌ ವಿಮಾನಗಳನ್ನು ಮತ್ತು ನವೆಂಬರ್ 10 ರಿಂದ ದೆಹಲಿ-ಗುವಾಂಗ್‌ಝೌ ವಿಮಾನಗಳನ್ನು ಪುನರಾರಂಭಿಸುತ್ತಿದೆ.
ಚೀನಾದ ವಿಮಾನಯಾನ ಸಂಸ್ಥೆ ಚೀನಾ ಈಸ್ಟರ್ನ್ ನವೆಂಬರ್ 9 ರಿಂದ ಶಾಂಘೈ-ದೆಹಲಿ ವಿಮಾನಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದೆ.
2020 ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಸ್ಥಗಿತಗೊಳಿಸಲಾದ ಭಾರತ ಮತ್ತು ಚೀನಾ ನಡುವಿನ ನೇರ ವಿಮಾನ ಸೇವೆಗಳ ಪುನರಾರಂಭವು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಪೂರ್ವ ಲಡಾಖ್‌ನಲ್ಲಿನ ಗಡಿ ಬಿಕ್ಕಟ್ಟಿನಿಂದಾಗಿ ನಿರಂತರವಾಗಿ ವಿಳಂಬವಾಯಿತು.
ಆಗಸ್ಟ್ 31 ರಂದು ಚೀನಾದ ಟಿಯಾಂಜಿನ್‌ನಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಸಭೆಯ ನಂತರ ನೀಡಿದ ಹೇಳಿಕೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಎರಡೂ ದೇಶಗಳ ನಡುವೆ ನೇರ ವಿಮಾನ ಸೇವೆಗಳನ್ನು ಪುನರಾರಂಭಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದ್ದರು.
ಅಕ್ಟೋಬರ್ 26 ರಿಂದ ಚೀನಾಕ್ಕೆ ನೇರ ವಿಮಾನಗಳು ಪುನರಾರಂಭಗೊಳ್ಳಲಿವೆ ಎಂದು ಭಾರತ ಅಕ್ಟೋಬರ್ 2 ರಂದು ಘೋಷಿಸಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa