
ಪಾಟ್ನಾ, 25 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಿಹಾರದಲ್ಲಿ ನಡೆಯಲಿರುವ ಚುನಾವಣಾ ಹಿನ್ನಲೆಯಲ್ಲಿ ಖಗಾರಿಯಾ ಮತ್ತು ಮುಂಗೇರ್ ಜಿಲ್ಲೆಯ ನೌಗರ್ಹಿಯಲ್ಲಿ ನಡೆದ ರ್ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ಬಿಹಾರದ ಸಮಗ್ರ ಅಭಿವೃದ್ಧಿಗೆ “ಡಬಲ್ ಎಂಜಿನ್” ಸರ್ಕಾರದ ಅಗತ್ಯವಿದೆ ಎಂದು ಹೇಳಿದರು. ಮಹಾಮೈತ್ರಿಕೂಟದಲ್ಲಿ “ನಾಯಕತ್ವವೂ ಇಲ್ಲ, ಉದ್ದೇಶವೂ ಇಲ್ಲ” ಎಂದು ಟೀಕಿಸಿದ ಅವರು, ರಾಜ್ಯದಲ್ಲಿ ಮತ್ತೆ ಎನ್‌ಡಿಎ ಸರ್ಕಾರ ರಚನೆಯೇ ಪ್ರಗತಿಯ ಭರವಸೆ ಎಂದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಹಿತದೃಷ್ಟಿಯಿಂದ ಕೈಗೊಂಡ ಕ್ರಮಗಳಿಂದ ಬಿಹಾರದ ಕೃಷಿ ಉತ್ಪಾದನೆ ಹೆಚ್ಚಾಗಿದೆ ಎಂದು ಹೇಳಿದರು. ಕಳೆದ 11 ವರ್ಷಗಳಲ್ಲಿ ಬಿಹಾರಕ್ಕೆ ಸುಮಾರು ₹19 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಮತ್ತು ನೆರವು ನೀಡಲಾಗಿದೆ ಎಂದು ಅವರು ಉಲ್ಲೇಖಿಸಿದರು. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಆಸ್ಪತ್ರೆಗಳಲ್ಲಿ ಸಕಾಲಿಕ ಔಷಧೋಪಚಾರ, ಹೊಲಗಳಿಗೆ ನೀರಾವರಿ ಮತ್ತು ಮನೆಮನೆಗೆ ಶುದ್ಧ ನೀರಿನ ಸರಬರಾಜು ಎಂಬ ನಾಲ್ಕು ಮುಖ್ಯ ಗುರಿಗಳತ್ತ ಎನ್‌ಡಿಎ ಸರ್ಕಾರ ಕಟಿಬದ್ಧವಾಗಿದೆ ಎಂದರು.
ಅಮಿತ್ ಶಾ ಲಾಲು ಪ್ರಸಾದ್ ಯಾದವ್ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿ, ಲಾಲು ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ಬಯಸುತ್ತಾರೆ, ಸೋನಿಯಾ ಗಾಂಧಿ ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ಮೋದಿ ಬಿಹಾರದ ಯುವಕರ ಭವಿಷ್ಯ ರೂಪಿಸಲು ಶ್ರಮಿಸುತ್ತಿದ್ದಾರೆ,” ಎಂದರು
ಹಿಂದೂಸ್ತಾನ್ ಸಮಾಚಾರ್ / Rakesh Mahadevappa