
ನವದೆಹಲಿ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಿಹಾರ ವಿಧಾನ ಸಭಾ ಚುನಾವಣೆಗೆ ಪ್ರಚಾರ ಚುರುಕುಗೊಂಡಿದ್ದು ಇಂದು ಭಾರತೀಯ ಜನತಾ ಪಕ್ಷದ ಮೂವರು ಪ್ರಮುಖ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಚಾರ ನಡೆಸಲಿದ್ದಾರೆ.
ಬಿಜೆಪಿ ತನ್ನ ಅಧಿಕೃತ ಎಕ್ಸ ಖಾತೆಯಲ್ಲಿ ಈ ಮೂವರ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಹಂಚಿಕೊಂಡಿದೆ.
ಪ್ರಧಾನಿ ಮೋದಿ ಮೊದಲು ಸಮಷ್ಟಿಪುರ ಜಿಲ್ಲೆಗೆ ಭೇಟಿ ನೀಡಿ, ಬೆಳಿಗ್ಗೆ 11 ಗಂಟೆಗೆ ಕರ್ಪೂರಿ ಗ್ರಾಮದಲ್ಲಿ ಭಾರತ ರತ್ನ ದಿವಂಗತ ಕರ್ಪೂರಿ ಠಾಕೂರ್ ಅವರಿಗೆ ಗೌರವ ಸಲ್ಲಿಸಲಿದ್ದಾರೆ. ನಂತರ ಅವರು ಅಲ್ಲಿ ನಡೆಯುವ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಬೇಗುಸರಾಯ್‌ನಲ್ಲಿ ಅವರ ಎರಡನೇ ಸಾರ್ವಜನಿಕ ಸಭೆ ನಿಗದಿಯಾಗಿದೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಧ್ಯಾಹ್ನ 1:30 ಕ್ಕೆ ಸಿವಾನ್‌ನ ಕೈಲಾಲ್‌ಗಢ ಹೈಸ್ಕೂಲ್ ಮೈದಾನದಲ್ಲಿ ಮತ್ತು 3:15 ಕ್ಕೆ ಬಕ್ಸಾರ್‌ನ ಫೋರ್ಟ್ ಮೈದಾನದಲ್ಲಿ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದೇ ವೇಳೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಸಂಜೆ 6 ಗಂಟೆಗೆ ಹಾಜಿಪುರದ ಹತ್ಸರ್‌ಗಂಜ್ ನಾಕಾದಲ್ಲಿ ಬುದ್ಧಿಜೀವಿಗಳು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಸಭೆ ನಡೆಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa