ವಾಷಿಂಗ್ಟನ್, 22 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬುಡಾಪೆಸ್ಟ್‌ನಲ್ಲಿ ನಡೆಯಬೇಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಎರಡನೇ ಶೃಂಗಸಭೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಉಭಯ ನಾಯಕರ ಮಧ್ಯೆ ಶೃಂಗಸಭೆ ನಡೆಸುವ ಯಾವುದೇ ತಾತ್ಕಾಲಿಕ ಯೋಜನೆಗಳಿಲ್ಲ ಎಂದು ಅಮೆರಿಕ ಆಡಳಿತದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಟ್ರಂಪ್ ಅವರು “ಎರಡು ವಾರಗಳಲ್ಲಿ ಭೇಟಿಯಾಗಬಹುದು” ಎಂದು ದೂರವಾಣಿ ಸಂಭಾಷಣೆಯ ನಂತರ ಹೇಳಿದ್ದರೂ, ಮಂಗಳವಾರ “ಸಭೆ ಸಮಯ ವ್ಯರ್ಥವಾಗಬಾರದು” ಎಂದು ಹೇಳಿದರು ಎಂದು ಸಿಎನ್ಎನ್ ವರದಿ ಮಾಡಿದೆ. ಪುಟಿನ್ ಅವರನ್ನು ಭೇಟಿಯಾಗುವ ಸಾಧ್ಯತೆಯ ಸುಳಿವು ನೀಡಿದ್ದ ಟ್ರಂಪ್, ಅದು ಈಗ ತಮ್ಮ ಪ್ರಮುಖ ಆದ್ಯತೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾವು ಮುಂದಿನ ದಿನಗಳಲ್ಲಿ ಏನು ಮಾಡುತ್ತಿದ್ದೇವೆ ಎಂಬುದನ್ನು ನಿಮಗೆ ತಿಳಿಸುತ್ತೇವೆ” ಎಂದು ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಹಿಂದಿನ ವಾರ ಟ್ರಂಪ್ ಹೇಳಿಕೆಯ ಪ್ರಕಾರ, ಅಮೆರಿಕ ಮತ್ತು ರಷ್ಯಾ ಉನ್ನತ ಮಟ್ಟದ ಸಲಹೆಗಾರರು ಮುಂದಿನ ವಾರ ಭೇಟಿಯಾಗಬೇಕಿತ್ತು. ನಂತರ, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹಾಗೂ ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರ ಮಾತುಕತೆ ಟ್ರಂಪ್–ಪುಟಿನ್ ಶೃಂಗಸಭೆಗೆ ಅಡಿಪಾಯ ಹಾಕುತ್ತದೆ ಎಂಬ ನಿರೀಕ್ಷೆ ವ್ಯಕ್ತವಾಗಿತ್ತು.
ಆದರೆ ರಾಜತಾಂತ್ರಿಕ ಸಂಪರ್ಕಗಳು ತಾತ್ಕಾಲಿಕವಾಗಿ ನಿಂತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದ ಸಾಧ್ಯ ಅಂತ್ಯದ ಬಗ್ಗೆ ರುಬಿಯೊ ಹಾಗೂ ಲಾವ್ರೊವ್ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಬ್ಬರು ಸೋಮವಾರ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದು, ಅದು ಫಲಪ್ರದವಾಗಿದೆ ಎಂಬ ಅಂಶವನ್ನು ಅಮೆರಿಕ ಆಡಳಿತದ ಅಧಿಕಾರಿ ಒಬ್ಬರು ದೃಢಪಡಿಸಿದ್ದಾರೆ. ಆದ್ದರಿಂದ ಮುಖಾಮುಖಿ ಸಭೆ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಅದರಿಂದ ಅಧ್ಯಕ್ಷ ಟ್ರಂಪ್ ಮುಂದಿನ ದಿನಗಳಲ್ಲಿ ಪುಟಿನ್ ಅವರನ್ನು ಭೇಟಿಯಾಗುವ ಯಾವುದೇ ಯೋಜನೆಗಳನ್ನು ಹೊಂದಿಲ್ಲ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa