ಮಹಿಳೆ ಕಾಣೆ : ಪತ್ತೆಗೆ ಮನವಿ
ವಿಜಯಪುರ, 21 ಅಕ್ಟೋಬರ್ (ಹಿ.ಸ.): ಆ್ಯಂಕರ್: ವಿಜಯಪುರ ನಗರದ ಹಕೀಮ ಚೌಕ್ ಹತ್ತಿರದ ಪಾಶ್ಚಾಪುರ ಪೇಠ ನಿವಾಸಿಯಾದ 33 ವರ್ಷದ ರೇಖಾ ಗಂ. ಭೀಮಾಶಂಕರ ಕುಮಟಗಿ ಎಂಬ ಮಹಿಳೆ ದಿನಾಂಕ : 03-10-2025ರಿಂದ ಕಾಣೆಯಾಗಿರುವ ಕುರಿತು ಗೋಲಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಮಹಿಳೆ ಪತ್ತೆಗೆ
ಮಹಿಳೆ ಕಾಣೆ : ಪತ್ತೆಗೆ ಮನವಿ


ವಿಜಯಪುರ, 21 ಅಕ್ಟೋಬರ್ (ಹಿ.ಸ.):

ಆ್ಯಂಕರ್: ವಿಜಯಪುರ ನಗರದ ಹಕೀಮ ಚೌಕ್ ಹತ್ತಿರದ ಪಾಶ್ಚಾಪುರ ಪೇಠ ನಿವಾಸಿಯಾದ 33 ವರ್ಷದ ರೇಖಾ ಗಂ. ಭೀಮಾಶಂಕರ ಕುಮಟಗಿ ಎಂಬ ಮಹಿಳೆ ದಿನಾಂಕ : 03-10-2025ರಿಂದ ಕಾಣೆಯಾಗಿರುವ ಕುರಿತು ಗೋಲಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಮಹಿಳೆ ಪತ್ತೆಗೆ ಠಾಣೆಯ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕಾಣೆಯಾದ ಮಹಿಳೆಯು ಸಾಧಾರಣ ಮೈಕಟ್ಟು, ದುಂಡುಮುಖ, ನೆಟ್ಟನೆಯ ಮೂಗು, ಸಾದಾಗಪ್ಪು ಮೈ ಬಣ್ಣ ಹೊಂದಿದ್ದು, 5.4 ಅಡಿ ಎತ್ತರವಿದ್ದು, ಕನ್ನಡ ಮಾತನಾಡುತ್ತಿದ್ದು, ಕಾಣೆಯಾದ ಸಂದರ್ಭದಲ್ಲಿ ಕಪ್ಪು ಮಿಶ್ರಿತ ಚಾಕಲೇಟ್ ಬಣ್ಣದ ನೈಟಿ ಧರಿಸಿದ್ದು, ಈ ಚಹರೆಪಟ್ಟಿಯುಳ್ಳ ಮಹಿಳೆ ಪತ್ತೆಯಾದಲ್ಲಿ ಸಾರ್ವಜನಿಕರು ಪೊಲಿಸ್ ಕಂಟ್ರೋಲ್ ರೂಂ ದೂ: 08352-250214 ಅಥವಾ ಗೋಲಗುಂಬಜ್ ಪೊಲಿಸ್ ಠಾಣೆಗೆ ಮಾಹಿತಿ ಒದಗಿಸುವಂತೆ ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande