ಚಂಡೀಗಡ, 21 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಮೃತಸರದಲ್ಲಿ ಪಂಜಾಬ್ ಪೊಲೀಸ್ ಮತ್ತು ಕೇಂದ್ರ ಸಂಸ್ಥೆಗಳ ಸಹಯೋಗದಲ್ಲಿ ನಡೆಸಿದ ಗುಪ್ತಚರ ಕಾರ್ಯಾಚರಣೆಯಲ್ಲಿ ಇಬ್ಬರು ಯುವಕರನ್ನು ಬಂಧಿಸಿ, ಅವರಿಂದ ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್ ವಶಪಡಿಸಿಕೊಂಡು ಭಯೋತ್ಪಾದನಾ ದಾಳಿಯ ಸಂಚು ವಿಫಲಗೊಳಿಸಿದ್ದಾರೆ.
ಬಂಧಿತರು ಮೆಹಕ್‌ದೀಪ್ ಸಿಂಗ್ ಅಲಿಯಾಸ್ ಮೆಹಕ್ ಮತ್ತು ಆದಿತ್ಯ ಅಲಿಯಾಸ್ ಆದಿ ಎಂದು ಗುರುತಸಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಅವರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಫಿರೋಜ್‌ಪುರ ಜೈಲಿನಲ್ಲಿರುವ ಹರ್‌ಪ್ರೀತ್ ಸಿಂಗ್ ಅಲಿಯಾಸ್ ವಿಕ್ಕಿಯೊಂದಿಗೆ ಸಹ ಸಂಪರ್ಕ ಹೊಂದಿದ್ದರು. ವಶಪಡಿಸಿದ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನಿ ನಿರ್ವಾಹಕರ ಆಜ್ಞೆಯ ಮೇರೆಗೆ ದಾಳಿಯಲ್ಲಿ ಬಳಸಲು ಯೋಜಿಸಲಾಗಿತ್ತು ಎಂದು ಪಂಜಾಬ್ ಡಿಜಿಪಿ ತಿಳಿಸಿದ್ದಾರೆ.
ಘಟನೆ ಕುರಿತು ಅಮೃತಸರದ ಘರಿಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಪೂರ್ಣ ಜಾಲವನ್ನು ಬಯಲು ಮಾಡಲು ತನಿಖೆ ಮುಂದುವರೆದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa