ವಿಜಯಪುರದಲ್ಲಿ ಪೊಲೀಸ ಹುತಾತ್ಮ ದಿನಾಚರಣೆ
ವಿಜಯಪುರ, 21 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲಾ ಪೊಲಿಸ್ ವತಿಯಿಂದ ಪೋಲಿಸ್ ಹುತಾತ್ಮ ದಿನಾಚರಣೆ‌ ಮಾಡಲಾಯಿತು. ವಿಜಯಪುರ ನಗರದ ಜಿಲ್ಲಾ ಪೋಲಿಸ್ ಕವಾಯತ್ ಮೈದಾನದಲ್ಲಿ ಹುತಾತ್ಮ ಪೋಲಿಸರಿಗೆ ಗೌರವ ನಮನ ಸಲ್ಲಿಸಲಾಯಿತು.ಇನ್ನು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ನಮನ ಸಲ್
ಪೊಲೀಸ


ವಿಜಯಪುರ, 21 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲಾ ಪೊಲಿಸ್ ವತಿಯಿಂದ ಪೋಲಿಸ್ ಹುತಾತ್ಮ ದಿನಾಚರಣೆ‌ ಮಾಡಲಾಯಿತು.

ವಿಜಯಪುರ ನಗರದ ಜಿಲ್ಲಾ ಪೋಲಿಸ್ ಕವಾಯತ್ ಮೈದಾನದಲ್ಲಿ ಹುತಾತ್ಮ ಪೋಲಿಸರಿಗೆ ಗೌರವ ನಮನ ಸಲ್ಲಿಸಲಾಯಿತು.ಇನ್ನು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ನಮನ ಸಲ್ಲಿಸಿದ ಪೋಲಿಸ್ ಪಡೆಗಳು. ಅಲ್ಲದೇ, ಕಳೆದ ಒಂದು ವರ್ಷದಲ್ಲಿ ಹುತಾತ್ಮರಾದ ಪೋಲಿಸರಿಗೆ ಜಿಲ್ಲಾ ಪೋಲಿಸ್ ವತಿಯಿಂದ ಗೌರವ ನಮನ ಸಲ್ಲಿಸಿ, ಭುಜಕ್ಕೆ ಕಪ್ಪು ಪಟ್ಟಿ ಧರಿಸಿ, ಪುಷ್ಪನಮನ ಸಲ್ಲಿಸಿ ಗೌರವ ನಮನ ಮಾಡಿದರು.

ಈ ವೇಳೆ ಪೊಲೀಸ ದ್ವಜ ಇಳಿಸಿ ಎರಡು ನಿಮಿಷ ಮೌನಾಚರಣೆ ಮಾಡಿ ಗೌರವ ಸಲ್ಲಿಕೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಹರೀಶ್.ಎ, ಜಿಲ್ಲಾಧಿಕಾರಿ ಡಾ.ಕೆ ಆನಂದ, ಜಿಲ್ಲಾಪಂಚಾಯತ್ ಸಿಇಓ ರಿಷಿ ಆನಂದ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಜಿಲ್ಲೆಯ ಪೋಲಿಸ್ ಅಧಿಕಾರಿಗಳು ಭಾಗಿ,

ನಿವೃತ್ತ ಪೋಲಿಸರು, ಪೋಲಿಸ್ ಕುಟುಂಬಸ್ಥರು, ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande