ಮುಂದಿನ ಮಾರ್ಚ್ ವೇಳೆಗೆ ನಕ್ಸಲಿಸಂ ನಿರ್ಮೂಲನೆ : ರಕ್ಷಣಾ ಸಚಿವ ರಾಜನಾಥ್ ಸಿಂಗ್
ನವದೆಹಲಿ, 21 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ದೇಶದ ಆಂತರಿಕ ಭದ್ರತಾ ವ್ಯವಸ್ಥೆ ಶೀಘ್ರದಲ್ಲೇ ಹೊಸ ಮೈಲಿಗಲ್ಲು ತಲುಪಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಪೊಲೀಸ್ ಸ್ಮಾರಕ ದಿನದ ಅಂಗವಾಗಿ ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಮಾಲಾರ್ಪಣೆ ಮಾ
Rajnath Singh


ನವದೆಹಲಿ, 21 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ದೇಶದ ಆಂತರಿಕ ಭದ್ರತಾ ವ್ಯವಸ್ಥೆ ಶೀಘ್ರದಲ್ಲೇ ಹೊಸ ಮೈಲಿಗಲ್ಲು ತಲುಪಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಪೊಲೀಸ್ ಸ್ಮಾರಕ ದಿನದ ಅಂಗವಾಗಿ ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, “ಮುಂದಿನ ವರ್ಷದ ಮಾರ್ಚ್ ವೇಳೆಗೆ ದೇಶದಿಂದ ನಕ್ಸಲಿಸಂ ಸಮಸ್ಯೆ ಸಂಪೂರ್ಣವಾಗಿ ನಿರ್ಮೂಲನೆಯಾಗಲಿದೆ” ಎಂದು ಹೇಳಿದರು.

ಲಡಾಖ್‌ನ ಹಾಟ್ ಸ್ಪ್ರಿಂಗ್ಸ್‌ನಲ್ಲಿ ಚೀನಾ ಸೈನಿಕರ ದಾಳಿಯಲ್ಲಿ ಹುತಾತ್ಮರಾದ ಪೊಲೀಸರ ಸ್ಮರಣಾರ್ಥ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿ ರಾಜನಾಥ್ ಸಿಂಗ್, ಸೇನೆಯು ದೇಶದ ಭೌಗೋಳಿಕ ಸಮಗ್ರತೆಯನ್ನು ಕಾಪಾಡಿದರೆ, ಪೊಲೀಸರು ಭಾರತದ ಸಾಮಾಜಿಕ ಸಮಗ್ರತೆಯ ರಕ್ಷಕರು ಎಂದರು.

ನಕ್ಸಲಿಸಂ ನಿರ್ಮೂಲನೆಗೆ ಪೊಲೀಸ್, ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ಸ್ಥಳೀಯ ಆಡಳಿತದ ಸಂಘಟಿತ ಪ್ರಯತ್ನಗಳು ಫಲ ನೀಡುತ್ತಿವೆ ಎಂದು ಹೇಳಿದರು. ಒಂದು ಕಾಲದಲ್ಲಿ ‘ರೆಡ್ ಕಾರಿಡಾರ್’ ಎಂದು ಕರೆಯಲ್ಪಟ್ಟ ಪ್ರದೇಶಗಳು ಈಗ ಅಭಿವೃದ್ಧಿಯ ಕಾರಿಡಾರ್‌ಗಳಾಗಿ ರೂಪಾಂತರಗೊಂಡಿವೆ ಎಂದರು. ಹಲವು ಉನ್ನತ ನಕ್ಸಲೀಯರು ಈ ವರ್ಷ ಹತ್ಯೆಗೀಡಾಗಿದ್ದು, ಅನೇಕರು ಶರಣಾಗುತ್ತಿರುವುದಾಗಿ ಮಾಹಿತಿ ನೀಡಿದರು.

ರಾಜನಾಥ್ ಸಿಂಗ್ ಪೊಲೀಸ್ ಇಲಾಖೆಯ ಸೇವೆಯನ್ನು ಪ್ರಶಂಸಿಸಿ, ಇಂದು ಜನರು ಶಾಂತಿಯುತವಾಗಿ ನಿದ್ರಿಸುತ್ತಿರುವುದು ಜಾಗರೂಕ ಸಶಸ್ತ್ರ ಪಡೆಗಳು ಮತ್ತು ಪೊಲೀಸರ ತ್ಯಾಗದ ಫಲ ಎಂದು ಹೇಳಿದರು. ಪೊಲೀಸರು ಅಪರಾಧದ ವಿರುದ್ಧ ಮಾತ್ರವಲ್ಲದೆ, ಗ್ರಹಿಕೆಯ ವಿರುದ್ಧವೂ ಹೋರಾಡುವ ಯೋಧರು ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್, ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಐಬಿ ನಿರ್ದೇಶಕ ತಪನ್ ದೇಕಾ, ಬಿಎಸ್ಎಫ್ ಮಹಾನಿರ್ದೇಶಕ ದಲ್ಜಿತ್ ಸಿಂಗ್ ಚೌಧರಿ ಸೇರಿದಂತೆ ಹಲವು ಮುಖ್ಯಸ್ಥರು ಮತ್ತು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande