ನವಿ ಮುಂಬೈ : ಎರಡು ಪ್ರತ್ಯೇಕ ಬೆಂಕಿ ಅವಘಡಗಳಲ್ಲಿ 6 ಸಾವು, 13 ಮಂದಿ ಗಾಯ
ಮುಂಬಯಿ, 21 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ನವಿ ಮುಂಬೈನಲ್ಲಿ ಮಂಗಳವಾರ ಬೆಳಗಿನ ಜಾವ ಎರಡು ಪ್ರತ್ಯೇಕ ಬೆಂಕಿ ಅವಘಡಗಳು ಸಂಭವಿಸಿ, 6 ಮಂದಿ ಸಾವನ್ನಪ್ಪಿದ್ದು, 13 ಮಂದಿ ಸುಟ್ಟು ಗಾಯಗೊಂಡಿದ್ದಾರೆ. ಹಠಾತ್ ಬೆಂಕಿ ಅವಘಡದಲ್ಲಿ ರಹೇಜಾ ರೆಸಿಡೆನ್ಸಿ ಹೌಸಿಂಗ್ ಸೊಸೈಟಿಯ 10–12ನೇ ಮಹಡಿಗಳಿಗೆ ಬೆಂಕಿ ಹರಡ
Fire


ಮುಂಬಯಿ, 21 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ನವಿ ಮುಂಬೈನಲ್ಲಿ ಮಂಗಳವಾರ ಬೆಳಗಿನ ಜಾವ ಎರಡು ಪ್ರತ್ಯೇಕ ಬೆಂಕಿ ಅವಘಡಗಳು ಸಂಭವಿಸಿ, 6 ಮಂದಿ ಸಾವನ್ನಪ್ಪಿದ್ದು, 13 ಮಂದಿ ಸುಟ್ಟು ಗಾಯಗೊಂಡಿದ್ದಾರೆ. ಹಠಾತ್ ಬೆಂಕಿ ಅವಘಡದಲ್ಲಿ ರಹೇಜಾ ರೆಸಿಡೆನ್ಸಿ ಹೌಸಿಂಗ್ ಸೊಸೈಟಿಯ 10–12ನೇ ಮಹಡಿಗಳಿಗೆ ಬೆಂಕಿ ಹರಡಿದ್ದು, ನಾಲ್ವರು ಸಾವನ್ನಪ್ಪಿ , 10 ಮಂದಿ ಗಾಯಗೊಂಡಿದ್ದಾರೆ.

ಮತ್ತೊಂದು ಘಟನೆ ಸೆಕ್ಟರ್ 36 ರ ಅಂಬೆ ಶ್ರದ್ಧಾ ಸಹಕಾರಿ ಸಂಘದ ಮನೆಯೊಂದರಲ್ಲಿ ಸಂಭವಿಸಿ, ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳವು ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಪೊಲೀಸರು ಎರಡೂ ಘಟನೆಗಳ ಕುರಿತು ತನಿಖೆ ಕೈಗೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande