ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
ಗದಗ, 21 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ 13 ಫಲಾನುಭವಿ ಆಧಾರಿತ ಯೋಜನೆಗಳನ್ನು 2025-26ನೇ ಸಾಲಿನಲ್ಲಿ ಸುವಿಧಾ ಯೋಜನೆ ಇವರಿಂದ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಆನ್‌ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಲಾಗುತ್ತಿದೆ. ಈ ಯೋಜನೆಗಳನ್ನು ಆನಲೈನ್ ವೇದಿಕೆ
ಪೋಟೋ


ಗದಗ, 21 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ 13 ಫಲಾನುಭವಿ ಆಧಾರಿತ ಯೋಜನೆಗಳನ್ನು 2025-26ನೇ ಸಾಲಿನಲ್ಲಿ ಸುವಿಧಾ ಯೋಜನೆ ಇವರಿಂದ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಆನ್‌ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಲಾಗುತ್ತಿದೆ.

ಈ ಯೋಜನೆಗಳನ್ನು ಆನಲೈನ್ ವೇದಿಕೆಯಿಂದ ಅನುಷ್ಠಾನಗೊಳಿಸುವ ಉದ್ದೇಶದಿಂದ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯಡಿ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಆನಲೈನ್ ವೇದಿಕೆಯಲ್ಲಿ ಅಳವಡಿಸಲಾಗಿರುವ ಯೋಜನೆಗಳು ಈ ಕೆಳಗಿನಂತಿವೆ.

ಯೋಜನೆಗಳ ವಿವರ : ಆಧಾರ, ವೈದ್ಯಕೀಯ ಪರಿಹಾರ ನಿಧಿ, ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ನಿರುದ್ಯೋಗ ಭತ್ಯೆ , ಶಿಶು ಪಾಲನಾ ಭತ್ಯೆ, , ಮರಣ ಪರಿಹಾರ ನಿಧಿ, ಪ್ರತಿಭೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್ , ದೃಷ್ಟಿದೋಷ ಹೊಂದಿರುವ ವಿಕಲಚೇತನರಿಗೆ ಕಿಟ್ , ದೈಹಿಕ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ , ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ , ಸಾಧನೆ ಸಲಕರಣೆ , ವಿಕಲಚೇತನ ವ್ಯಕ್ತಿಗಳಿಗೆ ಬ್ಯಾಟರಿ ಚಾಲಿತ ವೀಲ್ ಚೇರ್.

ಸದರಿ ಯೋಜನೆಗಳಿಗೆ 2025-26ನೇ ಸಾಲಿಗೆ ವಿಕಲಚೇತನ ಫಲಾನುಭವಿಗಳು ಆನಲೈನ್ ಸೇವಾಸೀಂಧು ತಂತ್ರಾಂಶದ ಮೂಲಕ ಮೂಲಕ ಗ್ರಾಮ ಒನ್, ಮತ್ತು ಕರ್ನಾಟಕ ಒನ್ ಹಾಗೂ ನೇರವಾಗಿಯು ಸಹ ವಿಕಲಚೇತನರ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ:31/10/2025 ರವರೆಗೆ ದಿನಾಂಕವನ್ನು ಮುಂದುವರೆಸಲಾಗಿದೆ.

ವಿಕಲಚೇತನರು ಆನಲೈನ ಮೂಲಕ ಅರ್ಜಿ ಸಲ್ಲಿಸಿ ಯೋಜನೆಗಳ ಸೌಲಭ್ಯವನ್ನು ಪಡೆಯಲು ಪಡಯಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಗದಗ ಜಿಲ್ಲೆಯ ತಾಲ್ಲೂಕ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಮ್.ಆರ್.ಡಬ್ಲೂಗಳಾದ ಖಾಜಾಹುಸೇನ ಕಾತರಕಿ, ತಾಲ್ಲೂಕ ಪಂಚಾಯತ, ಗದಗ – 8867556465; ಬಸವರಾಜ ಓಲಿ, ತಾಲ್ಲೂಕ ಪಂಚಾಯತ, ರೋಣ – 9741615926 ; ಶಶಿಕಲಾ ವಡ್ಡಟ್ಟಿ, ತಾಲ್ಲೂಕ ಪಂಚಾಯತ, ಮುಂಡರಗಿ 9611922445 ; ಭಾರತಿ ಮುರಶಿಳ್ಳಿ, ತಾಲ್ಲೂಕ ಪಂಚಾಯತ, ಶಿರಹಟ್ಟಿ – 8951128679 ; ಶಿವಾನಂದ ಹಾದಿಮನಿ, ತಾಲ್ಲೂಕ ಪಂಚಾಯತ, ನರಗುಂದ – 9591679022 ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಗದಗ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ: 029 ರ ದೂರವಾಣಿ ಸಂಖ್ಯೆ: 08372-220419 ಮೂಲಕ ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande