ವಿಜಯಪುರ, 21 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಚಿವರಾದ ಶಿವಾನಂದ ಪಾಟೀಲ ಅವರನ್ನು ಭೇಟಿಮಾಡಿದ ಬಸವನಬಾಗೇವಾಡಿ ಪೊಲೀಸ್ ಅಧಿಕಾರಿಗಳು ಹಬ್ಬದ ಶುಭಾಶಯ ಕೋರಿದರು.
ಮಂಗಳವಾರ ನಗರದಲ್ಲಿರುವ ಸಚಿವರ ಗೃಹ ಕಛೇರಿಯಲ್ಲಿ ಬಸವನಬಾಗೇವಾಡಿ ಉಪ ವಿಭಾಗದ ಡಿ.ಎಸ್.ಪಿ. ಬಲ್ಲಪ್ಪ ನಂದರೆಡ್ಡಿ ನೇತೃತ್ವದಲ್ಲಿ ಆಗಮಿಸಿದ್ದ ಬಸವನಬಾಗೇವಾಡಿ ವಿಧಾನಸಭೆ ವ್ಯಾಪ್ತಿಯ ಠಾಣೆಗಳ ಪೊಲೀಸ್ ಅಧಿಕಾರಿಗಳು ಹೂಗುಚ್ಚ ನೀಡಿ ಶುಭಾಶಯ ಕೋರಿದರು.
ಹಬ್ಬ, ಸರ್ಕಾರಿ ರಜಾ ದಿನಗಳನ್ನೂ ಲೆಕ್ಕಿಸದೇ ಶಾಂತಿ, ಸುವ್ಯವಸ್ಥೆಗಾಗಿ ನಿರಂತರ ಕರ್ತವ್ಯ ನಿರ್ವಹಿಸುವ ಪೊಲೀಸರ ಸೇವೆ ಶ್ಲಾಘನೀಯ ಎಂದು ಬಣ್ಣಿಸಿದರು.
ಬಸವನಬಾಗೇವಾಡಿ ಡಿಎಸ್‌ಪಿ ಎನ್. ಬಲ್ಲಪ್ಪ ನಂದಗಾವಿ, ನಿಡಗುಂದಿ ಸಿಪಿಐ ಶರಣಗೌಡ ಬಸವನ ಬಾಗೇವಾಡಿ, ನಿಡಗುಂದಿ, ಮನಗೂಳಿ, ಆಲಮಟ್ಟಿ, ಪಿಎಸ್‌ಐಗಳಾದ ಪಿ.ದಶಾಲಾ, ಶ್ರೀಕಾಂತ ಕಾಂಬಳೆ, ಎಫ್.ಎಸ್. ಇಂಡಿಕರ ಸೇರಿದಂತೆ ಠಾಣೆಗಳ ಅಧಿಕಾರಿಗಳು, ಪೊಲೀಸ ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande