ಡೆಹ್ರಾಡೂನ್, 21 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬದರಿನಾಥ ಮತ್ತು ಕೇದಾರನಾಥ ಧಾಮಗಳಲ್ಲಿ ದೀಪಾವಳಿ ಸಂಭ್ರಮದೊಂದಿಗೆ ಆಚರಿಸಲಾಯಿತು. ಮೊದಲ ಬಾರಿಗೆ ಬದರಿನಾಥ ಧಾಮವನ್ನು 12,000 ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಲಕ್ಷ್ಮಿ ದೇವಿಗೆ 56 ಖಾದ್ಯಗಳ ನೈವೇದ್ಯಗಳನ್ನು ಅರ್ಪಿಸಲಾಯಿತು.
ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಅಧ್ಯಕ್ಷ ಹೇಮಂತ್ ದ್ವಿವೇದಿ ನೀಡಿರುವ ಮಾಹಿತಿಯಂತೆ, ದೇವಾಲಯಗಳನ್ನು ಹೂವುಗಳಿಂದ ಅಲಂಕೃತ ಮಾಡಲಾಗಿದೆ ಮತ್ತು ಯಾತ್ರಿಕ ಪುರೋಹಿತರು, ಹಕ್ಕುದಾರರ ಸಹಕಾರದೊಂದಿಗೆ ದೀಪೋತ್ಸವ ಕಾರ್ಯಕ್ರಮ ನಡೆಸಲಾಗಿದೆ.
ಬದರಿನಾಥ ಹೋಟೆಲ್ ಸಂಘದ ಸಹಾಯದಿಂದ ಅಕ್ಟೋಬರ್ 23 ರವರೆಗೆ ದೀಪೋತ್ಸವವು ಜರುಗಲಿದೆ. ಕೇದಾರನಾಥ ಧಾಮದಲ್ಲಿಯೂ ಯಾತ್ರಿಕ ಪುರೋಹಿತರ ಸಮನ್ವಯದಲ್ಲಿ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲ್ಪಟ್ಟಿದ್ದು, ದೇವಾಲಯ ಸಂಕೀರ್ಣ ಮತ್ತು ಮಾರ್ಗಗಳನ್ನು 12 ಕ್ವಿಂಟಾಲ್ ಹೂವುಗಳಿಂದ ಅಲಂಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 23ರಂದು ಕೇದಾರನಾಥ ದೇವಾಲಯದ ಬಾಗಿಲು ಮುಚ್ಚುವಿಕೆ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa