ಮೃತ ಅನಾಮಧೇಯ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ
ವಿಜಯಪುರ, 21 ಅಕ್ಟೋಬರ್ (ಹಿ.ಸ.) ಆ್ಯಂಕರ್: ಸೋಲಾಪುರ ಕಡೆಯಿಂದ ವಿಜಯಪುರ ಕಡೆಗೆ ಬರುವ ಎನ್‍ಎಚ್-52 ರಸ್ತೆಯ ಮೇಲೆ ಅನಾಮಿಕ ವಾಹನದಿಂದ ಅಪಘಾತಕ್ಕೀಡಾಗಿ ಅನಾಮಧೇಯ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಕುರಿತು ವಿಜಯಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮೃತ ಅನಾಮಧೇಯ ವ್ಯಕ್ತಿಯ ವಾರಸುದಾ
ಮೃತ ಅನಾಮಧೇಯ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ


ವಿಜಯಪುರ, 21 ಅಕ್ಟೋಬರ್ (ಹಿ.ಸ.)

ಆ್ಯಂಕರ್: ಸೋಲಾಪುರ ಕಡೆಯಿಂದ ವಿಜಯಪುರ ಕಡೆಗೆ ಬರುವ ಎನ್‍ಎಚ್-52 ರಸ್ತೆಯ ಮೇಲೆ ಅನಾಮಿಕ ವಾಹನದಿಂದ ಅಪಘಾತಕ್ಕೀಡಾಗಿ ಅನಾಮಧೇಯ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಕುರಿತು ವಿಜಯಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮೃತ ಅನಾಮಧೇಯ ವ್ಯಕ್ತಿಯ ವಾರಸುದಾರರ ಪತ್ತೆಗೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಮೃತ ಅನಾಮಧೇಯ ವ್ಯಕ್ತಿಯು 5.3 ಅಡಿ ಎತ್ತರ, ಮೈಯಿಂದ ಸದೃಢ, ಸಾದಾಗಪ್ಪ ಬಣ್ಣ, ದುಂಡು ಮುಖ, ಮೊಂಡ ಮೂಗು ಹೊಂದಿದ್ದಾನೆ. ಮೈಮೇಲೆ ಕಂದು ಬಣ್ಣದ ಟೀ-ಶರ್ಟ್, ಕಪ್ಪು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ.

ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಸಾರ್ವಜನಿಕರು ಡಿಎಸ್‍ಪಿ ವಿಜಯಪುರ ಮೊ: 9480804220, ಸಂಚಾರಿ ಪೊಲೀಸ್ ಠಾಣೆ ವಿಜಯಪುರ 08352-252600 ಮೊ:9480804246, ಅಥವಾ ಕಂಟ್ರೋಲ ರೂಮ್ ವಿಜಯಪುರ ನಂ: 08352-250844 ಮಾಹಿತಿ ಒದಗಿಸುವಂತೆ ಸಂಚಾರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande