ಅಬುಧಾಬಿ ಬಿಎಪಿಎಸ್ ಮಂದಿರ ‘ಏಕತೆಯ ಅದ್ಭುತ ರಚನೆ’ : ಶಶಿ ತರೂರ್
ಅಬುಧಾಬಿ, 19 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರಕ್ಕೆ ಭೇಟಿ ನೀಡಿದ ಸಂಸದ ಡಾ. ಶಶಿ ತರೂರ್ ಅವರು ಅದನ್ನು “ಏಕತೆಯ ಅದ್ಭುತ ರಚನೆ” ಎಂದು ಶ್ಲಾಘಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರಾಜತಾಂತ್ರಿಕ ಪ್ರಯತ್ನದಿಂದ ಈ ದೇವಾಲಯ ನಿರ್ಮಾಣ ಸಾಧ್ಯವಾಯಿತೆಂದು ತ
Taroor


ಅಬುಧಾಬಿ, 19 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರಕ್ಕೆ ಭೇಟಿ ನೀಡಿದ ಸಂಸದ ಡಾ. ಶಶಿ ತರೂರ್ ಅವರು ಅದನ್ನು “ಏಕತೆಯ ಅದ್ಭುತ ರಚನೆ” ಎಂದು ಶ್ಲಾಘಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರಾಜತಾಂತ್ರಿಕ ಪ್ರಯತ್ನದಿಂದ ಈ ದೇವಾಲಯ ನಿರ್ಮಾಣ ಸಾಧ್ಯವಾಯಿತೆಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸನಲ್ಲಿ ಹೇಳಿದ್ದಾರೆ.

ಸ್ವಾಮಿ ಬ್ರಹ್ಮ ವಿಹಾರಿ ದಾಸ್ ಅವರೊಂದಿಗೆ ದೇವಾಲಯ ವೀಕ್ಷಿಸಿದ ತರೂರ್, “ಸಾಮರಸ್ಯದ ಗೋಡೆ”, ಮರಳುಗಲ್ಲಿನ ಕೆತ್ತನೆಗಳು ಹಾಗೂ ಶಾಖನಿರೋಧಕ ವಿನ್ಯಾಸಗಳನ್ನು ಮೆಚ್ಚಿದರು. ಯುಎಇ ಸರ್ಕಾರದ ಒಳಗೊಳ್ಳುವಿಕೆ ಮತ್ತು ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರ ಬೆಂಬಲವನ್ನು ಪ್ರಶಂಸಿಸಿದ ಅವರು, “ಈ ಮಂದಿರ ಮಾನವೀಯ ಏಕತೆಯ ಪ್ರತೀಕ” ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande