ದೇಶೀಯ ನಿರ್ಮಿತ ತೇಜಸ್ ಮಾರ್ಕ್-1ಎ ಯುದ್ಧ ವಿಮಾನದ ಮೊದಲ ಹಾರಾಟ ಇಂದು
ನಾಸಿಕ್, 17 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಭಾರತದ ರಕ್ಷಣಾ ಮತ್ತು ವೈಮಾನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದಿನ ದಿನವು ಐತಿಹಾಸಿಕ ಮೈಲಿಗಲ್ಲಾಗಲಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ತಯಾರಿಸಿದ ದೇಶೀಯ ನಿರ್ಮಿತ ತೇಜಸ್ LCA ಮಾರ್ಕ್-1ಎ ಯುದ್ಧ ವಿಮಾನವು ಇಂದು ಮಹಾರಾಷ್ಟ್ರದ ನಾಸಿಕ್‌ನಲ್ಲ
Tejas


ನಾಸಿಕ್, 17 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಭಾರತದ ರಕ್ಷಣಾ ಮತ್ತು ವೈಮಾನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದಿನ ದಿನವು ಐತಿಹಾಸಿಕ ಮೈಲಿಗಲ್ಲಾಗಲಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ತಯಾರಿಸಿದ ದೇಶೀಯ ನಿರ್ಮಿತ ತೇಜಸ್ LCA ಮಾರ್ಕ್-1ಎ ಯುದ್ಧ ವಿಮಾನವು ಇಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮೊದಲ ಬಾರಿಗೆ ಆಕಾಶಕ್ಕೆ ಹಾರಲಿದೆ. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿರಲಿದ್ದಾರೆ.

ತೇಜಸ್ ಮಾರ್ಕ್-1ಎ ಯುದ್ಧ ವಿಮಾನವು ಭಾರತದ ಸಂಪೂರ್ಣ ಸ್ವದೇಶೀ ತಂತ್ರಜ್ಞಾನದಿಂದ ತಯಾರಿಸಿದ ಅತ್ಯಾಧುನಿಕ ಬಹುಪಾತ್ರ ಯುದ್ಧ ವಿಮಾನವಾಗಿದ್ದು, ದೇಶದ ರಕ್ಷಣಾ ಸ್ವಾವಲಂಬನೆಯತ್ತದ ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ.

ಎಚ್ಎಎಲ್ ಅಧಿಕಾರಿಗಳ ಪ್ರಕಾರ, ತೇಜಸ್ ಮಾರ್ಕ್-1ಎ ವಿಮಾನವು ಮುಂದಿನ ದಿನಗಳಲ್ಲಿ MiG-21 ಯುದ್ಧ ವಿಮಾನಗಳನ್ನು ಬದಲಿಸಲು ನಿಗದಿಪಡಿಸಲಾಗಿದೆ. ಭಾರತೀಯ ವಾಯುಪಡೆಯು ಕಳೆದ ಸೆಪ್ಟೆಂಬರ್ 26 ರಂದು ತನ್ನ ಕೊನೆಯ MiG-21 ವಿಮಾನವನ್ನು ನಿವೃತ್ತಗೊಳಿಸಿತ್ತು. ತೇಜಸ್‌ನ ಸೇರ್ಪಡೆಯಿಂದ ಭಾರತೀಯ ವಾಯುಪಡೆಯ ಸಾಮರ್ಥ್ಯಗಳಲ್ಲಿ ಮಹತ್ತರ ಬಲವರ್ಧನೆ ಆಗಲಿದೆ ಎಂದು ಎಚ್ಎಎಲ್ ತಿಳಿಸಿದೆ.

ತೇಜಸ್ ಮಾರ್ಕ್-1ಎ ವಿಮಾನವು ಮೂಲ ತೇಜಸ್ ಮಾದರಿಯ ಉನ್ನತ ಆವೃತ್ತಿ ಆಗಿದ್ದು, ಸುಮಾರು 2,200 ಕಿಲೋಮೀಟರ್‌ಗಳ ಹಾರಾಟ ವ್ಯಾಪ್ತಿ ಹೊಂದಿದೆ. ಇದರಲ್ಲಿದೆ ನವೀಕರಿಸಿದ ಏವಿಯಾನಿಕ್ಸ್, ರಾಡಾರ್ ವ್ಯವಸ್ಥೆ, ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆ ಹೊಂದಿದ್ದು ಇದು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿಯೂ, ಹಗಲು-ರಾತ್ರಿ ಕಾರ್ಯಾಚರಣೆಗಳಲ್ಲಿಯೂ, ಬಹು ಗುರಿಗಳನ್ನು ಏಕಕಾಲದಲ್ಲಿ ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande