ಸಂಡೂರು, 15 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಚೋರನೂರು ಹೋಬಳಿಯ ಹೊಸೂರು ಗ್ರಾಮವನ್ನು ದತ್ತು ಪಡೆದಿರುವ ಸಂಡೂರು ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರ ಹಾಗೂ ಭಾರತೀಯ ಸುರಾಜ್ಯ ಸಂಸ್ಥೆ ಜಂಟಿಯಾಗಿ ಗ್ರಾಮದಲ್ಲಿ 8 ಸೌರದೀಪಗಳನ್ನು, ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ಸರ್ಕಾರಿ ಶಾಲೆಗೆ ಕಂಪ್ಯೂಟರ್ - ಪ್ರಿಂಟರ್ ನೀಡಿವೆ.
ಶ್ರೀಶೈಲೇಶ್ವರ ವಿದ್ಯಾಕೇಂದ್ರ ಹಾಗೂ ಭಾರತೀಯ ಸುರಾಜ್ಯ ಸಂಸ್ಥೆಯ ಆಡಳಿತಾಧಿಕಾರಿ ಕುಮಾರ್ ಎಸ್. ನಾನಾವಟೆ ಅವರು, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಮಾತನಾಡಿ, ಗ್ರಾಮಸ್ಥರು ದುಶ್ಚಟಗಳಿಗೆ ಬಲಿಯಾಗದೇ ಕಷ್ಟಪಟ್ಟು ದುಡಿದ ಹಣವನ್ನು ಕುಟುಂಬದ ಏಳ್ಗೆಗಾಗಿ, ಆರೋಗ್ಯಕ್ಕಾಗಿ, ಶಿಕ್ಷಣಕ್ಕಾಗಿ ಮತ್ತು ಅಭಿವೃದ್ಧಿಗಾಗಿ ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಬೇಕು ಎಂದರು.
ಹೊಸೂರು ಗ್ರಾಮ ನಿವಾಸಿ, ಅತಿಥಿಗಳಾದ ಗಂಗಾಧರ ಅವರು, ಶ್ರೀಶೈಲೇಶ್ವರ ವಿದ್ಯಾಕೇಂದ್ರ ಹಾಗೂ ಭಾರತೀಯ ಸುರಾಜ್ಯ ಸಂಸ್ಥೆ ಹೊಸೂರು ಗ್ರಾಮವನ್ನು ದತ್ತು ಸ್ವೀಕರಿಸುವ ಪೂರ್ವದಲ್ಲಿ ಮತ್ತು ಪ್ರಸ್ತುತ ಆಗಿರುವ ಸುಧಾರಣೆಯ ಕುರಿತು ವಿಶ್ಲೇಷಿಸಿ, ದತ್ತು ಪಡೆದಿರುವ ಸಂಸ್ಥೆಗಳ ಬದ್ಧತೆ, ಸೇವಾ ಮನೋಭಾವವನ್ನು ಕೊಂಡಾಡಿದರು.
ಹೊಸೂರು ಗ್ರಾಮನಿವಾಸಿಗಳಾದ ಶ್ರೀಮತಿ ಪೂರ್ಣಿಮ ಹಾಗೂ ಜೆ. ಮಂಜುನಾಥ ಅವರು, ಶಿಕ್ಷಣ ಸಂಸ್ಥೆಯ ಗ್ರಾಮಾಭಿವೃದ್ಧಿಯ ಸಂಕಲ್ಪವನ್ನು ಮೆಚ್ಚಿದರು.
ಉಪನ್ಯಾಸಕರಾದ ಯು. ದೇವರಾಜ್, ಎಂ.ಜೆ. ಶರಣಬಸಪ್ಪ, ಗೋಣಿ ಬಸಪ್ಪ ಮುಖ್ಯ ಶಿಕ್ಷಕಿ ಸುಜಾತ ಘೋರ್ಪಡೆ, ರುಕ್ಮಿಣಿ ಕದಂ ಹೊಸೂರು ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್