ವಿಜಯಪುರ, 15 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕಿತ್ತೂರು ಚನ್ನಮ್ಮನವರ ವಿಜಯ ಜ್ಯೋತಿಯಾತ್ರೆಯು ಜಿಲ್ಲೆಗೆ ಕೊಲ್ಹಾರ ಮೂಲಕ ಸಂಜೆ 6-30ಕ್ಕೆ ವಿಜಯಪುರ ನಗರಕ್ಕೆ ಆಗಮಿಸಲಿದ್ದು, ಜ್ಯೋತಿಯಾತ್ರೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ವಾಗತ ಹಾಗೂ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿಜಯಪುರದಲ್ಲಿ ಸ್ವಾಗತ ಹಾಗೂ ಪೂಜೆ ನಂತರ ಯಾತ್ರೆಯು ತಿಕೋಟಾ ಮಾರ್ಗವಾಗಿ ಅಥಣಿಗೆ ಬೀಳ್ಕೊಡಲಾಗುತ್ತದೆ. ಆದ್ದರಿಂದ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande