ಹರಿಯಾಣ : ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಮರಣೋತ್ತರ ಪರೀಕ್ಷೆ ಪೂರ್ಣ
ಚಂಡೀಗಡ, 15 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಹರಿಯಾಣದ ಹಿರಿಯ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಮರಣೋತ್ತರ ಪರೀಕ್ಷೆ ಬುಧವಾರ, ಅಂದರೆ ಆತ್ಮಹತ್ಯೆಯ ಒಂಬತ್ತನೇ ದಿನ, ಚಂಡೀಗಢ ಪಿಜಿಐ ಆಸ್ಪತ್ರೆಯಲ್ಲಿ ನಡೆಸಲಾಯಿತು. ವೈ. ಪೂರಣ್ ಕುಮಾರ್ ಅವರು ಅಕ್ಟೋಬರ್ 7 ರಂದು ಮಧ್ಯಾಹ್ನ ಚಂಡೀಗಢದ ಸೆಕ್ಟರ
Postmortem


ಚಂಡೀಗಡ, 15 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಹರಿಯಾಣದ ಹಿರಿಯ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಮರಣೋತ್ತರ ಪರೀಕ್ಷೆ ಬುಧವಾರ, ಅಂದರೆ ಆತ್ಮಹತ್ಯೆಯ ಒಂಬತ್ತನೇ ದಿನ, ಚಂಡೀಗಢ ಪಿಜಿಐ ಆಸ್ಪತ್ರೆಯಲ್ಲಿ ನಡೆಸಲಾಯಿತು.

ವೈ. ಪೂರಣ್ ಕುಮಾರ್ ಅವರು ಅಕ್ಟೋಬರ್ 7 ರಂದು ಮಧ್ಯಾಹ್ನ ಚಂಡೀಗಢದ ಸೆಕ್ಟರ್-11 ರಲ್ಲಿರುವ ತಮ್ಮ ನಿವಾಸದಲ್ಲಿ ತಮ್ಮ ಸೇವಾ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಬಳಿಕ ಅವರ ಮರಣೋತ್ತರ ಪರೀಕ್ಷೆ ಹಾಗೂ ಅಂತ್ಯಕ್ರಿಯೆ ಪ್ರಕ್ರಿಯೆ ಹಲವು ದಿನಗಳಿಂದ ಮುಂದೂಡಲ್ಪಟ್ಟಿತ್ತು.

ಇತ್ತೀಚಿನ ಬೆಳವಣಿಗೆಯಲ್ಲಿ, ಮೃತ ಅಧಿಕಾರಿ ಪೂರಣ್ ಕುಮಾರ್ ಅವರ ಪತ್ನಿ ಮತ್ತು ಐಎಎಸ್ ಅಧಿಕಾರಿ ಅಮ್ನೀತ್ ಪಿ. ಕುಮಾರ್ ಅವರು ಹರಿಯಾಣ ಸರ್ಕಾರ ಮತ್ತು ಚಂಡೀಗಢ ಆಡಳಿತಕ್ಕೆ ಪತ್ರ ಬರೆದು ಮರಣೋತ್ತರ ಪರೀಕ್ಷೆಗೆ ಲಿಖಿತ ಅನುಮತಿ ನೀಡಿದ್ದಾರೆ. ಅವರು ತನಿಖೆ ಸಂಪೂರ್ಣ ಪಾರದರ್ಶಕ, ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಅಮ್ನೀತ್ ಕುಮಾರ್ ತಮ್ಮ ಪತ್ರದಲ್ಲಿ, “ನ್ಯಾಯದ ಹಿತದೃಷ್ಟಿಯಿಂದ ವೈದ್ಯಕೀಯ ಮಂಡಳಿಯು, ಬ್ಯಾಲಿಸ್ಟಿಕ್ ತಜ್ಞರ ಸಮ್ಮುಖದಲ್ಲಿ, ಮ್ಯಾಜಿಸ್ಟ್ರೇಟ್ ಮೇಲ್ವಿಚಾರಣೆಯಲ್ಲಿ ಮತ್ತು ಸಂಪೂರ್ಣ ವೀಡಿಯೊಗ್ರಫಿಯೊಂದಿಗೆ ಮರಣೋತ್ತರ ಪರೀಕ್ಷೆ ನಡೆಸುವ ಪ್ರಕ್ರಿಯೆಗೆ ನಾನು ಸಮ್ಮತಿಸಿದ್ದೇನೆ. ನ್ಯಾಯಾಂಗ ಮತ್ತು ಪೊಲೀಸ್ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ,” ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಚಂಡೀಗಢ ಉಪ ಆಯುಕ್ತ ನಿಶಾಂತ್ ಯಾದವ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೇಲ್ವಿಚಾರಣೆ ನಡೆಸಿದರು. ವೈದ್ಯಕೀಯ ಮಂಡಳಿಯು ಅಮ್ನೀತ್ ಪಿ. ಕುಮಾರ್ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮ್ಯಾಜಿಸ್ಟ್ರೇಟ್ ಹಾಗೂ ಎಫ್‌ಎಸ್‌ಎಲ್-ಬ್ಯಾಲಿಸ್ಟಿಕ್ ತಜ್ಞರು ಸಹ ಹಾಜರಿದ್ದರು. ಸಂಪೂರ್ಣ ಪ್ರಕ್ರಿಯೆಯ ವೀಡಿಯೊಗ್ರಫಿ ಮಾಡಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande