ರಾಯಚೂರು ಹಾರ್ವೆಸ್ಟರ್ ಹಬ್ ; ಕೃಷಿ ಇಲಾಖೆಯಿಂದ ಅರ್ಜಿ ಆಹ್ವಾನ
ರಾಯಚೂರು, 15 ಅಕ್ಟೋಬರ್(ಹಿ.ಸ.) : ಆ್ಯಂಕರ್ : 2025-26ನೇ ಸಾಲಿನಲ್ಲಿ ರಾಜ್ಯ ವಲಯ ಯಾಂತ್ರೀಕರಣ ಯೋಜನೆಯಡಿ ಹಾರ್ವೇಸ್ಟರ್ ಹಬ್ ಸ್ಥಾಪನೆಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಯಚೂರು ಜಿಲ್ಲೆಗೆ ಸಾಮಾನ್ಯ ವರ್ಗದ ವೈಯಕ್ತಿಕ ಫಲಾನುಭವಿಗಳಿಗೆ ಎರಡು ಘಟಕ, ಪರಿಶಿಷ್ಟ ಪಂಗಡ ವರ್ಗ ವೈಯಕ್ತಿಕ ಫಲ
ರಾಯಚೂರು ಹಾರ್ವೆಸ್ಟರ್ ಹಬ್ ; ಕೃಷಿ ಇಲಾಖೆಯಿಂದ ಅರ್ಜಿ ಆಹ್ವಾನ


ರಾಯಚೂರು, 15 ಅಕ್ಟೋಬರ್(ಹಿ.ಸ.) :

ಆ್ಯಂಕರ್ : 2025-26ನೇ ಸಾಲಿನಲ್ಲಿ ರಾಜ್ಯ ವಲಯ ಯಾಂತ್ರೀಕರಣ ಯೋಜನೆಯಡಿ ಹಾರ್ವೇಸ್ಟರ್ ಹಬ್ ಸ್ಥಾಪನೆಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಯಚೂರು ಜಿಲ್ಲೆಗೆ ಸಾಮಾನ್ಯ ವರ್ಗದ ವೈಯಕ್ತಿಕ ಫಲಾನುಭವಿಗಳಿಗೆ ಎರಡು ಘಟಕ, ಪರಿಶಿಷ್ಟ ಪಂಗಡ ವರ್ಗ ವೈಯಕ್ತಿಕ ಫಲಾನುಭವಿಗಳಿಗೆ ಒಂದು ಘಟಕ ಹಾಗೂ ಸಂಘ-ಸ0ಸ್ಥೆಗಳಿಗೆ ಒಂದು ಘಟಕ ಗುರಿ ಹೊಂದಿದ್ದು, ಆಸಕ್ತಿಯುಳ್ಳ ಫಲಾನುಭವಿಗಳು ಹಾಗೂ ಸಂಘ-ಸ0ಸ್ಥೆಗಳು ಹಾರ್ವೇಸ್ಟರ್ ಹಬ್ ಸ್ಥಾಪಿಸಲು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ, ಪಹಣಿ, ಎಫ್‌ಐಡಿ ಹೊಂದಿದ ಜಾತಿ ಪ್ರಮಾಣ ಪತ್ರ, ಗುರುತಿನ ಪತ್ರ, ಬ್ಯಾಂಕ್ ಖಾತೆಯ ವಿವರ, ಸಂಸ್ಥೆಯಾಗಿದ್ದರೆ ನೋಂದಾಯಿಸಿದ ಪ್ರಮಾಣ ಪತ್ರ ಮತ್ತು ಕಳೆದ 3 ಸಾಲಿನ ವಾಹಿವಾಟು ವರದಿ ಮತ್ತು ತಾತ್ವಿಕ ಸಾಲ ಮಂಜುರಾತಿ ಪತ್ರ (ಇನ್ ಪ್ರಿನ್ಸಿ¥ಪಲ್ ಲೋನ್ ಸೆಕ್ಷನ್ ಲೇಟರ್) ದಾಖಲಾತಿಗಳನ್ನು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅಕ್ಟೋಬರ್ 24ರೊಳಗೆ ಸಲ್ಲಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande