ವಿಜಯಪುರ, 15 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಒಂದೇ ಸೂರಿನಡಿ ಅಲೊಪಥಿ ಮತ್ತು ಆಯುರ್ವೇದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಗರದ ಬಿ.ಎಲ್.ಡಿ.ಇ ಆಯುರ್ವೇದ ಕಾಲೇಜಿನ ಆವರಣದಲ್ಲಿರುವ ನಗರ ಆರೋಗ್ಯ ಕೇಂದ್ರ ಮತ್ತು ಬಿ.ಎಲ್.ಡಿ.ಇ ಹೈಟೆಕ್ ಆಯುರ್ವೇದ ಆಸ್ಪತ್ರೆಯಲ್ಲಿ ಅಕ್ಟೋಬರ್ 17 ರಂದು ಶುಕ್ರವಾರ ನಡೆಯಲಿದೆ.
ಅಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಗೆ ಈ ಶಿಬಿರ ನಡೆಯಲಿದ್ದು, ಅಲೋಪಥಿ ಚಿಕಿತ್ಸೆಗಳು, ಬೆಂಬಲಿತ ಸೇವೆಗಳು, ಆಯುರ್ವೇದ ಚಿಕಿತ್ಸೆಗಳು ಲಭ್ಯವಿರಲಿವೆ.
ಈ ಶಿಬಿರದಲ್ಲಿ ಅಲೋಪತಿ ಚಿಕಿತ್ಸೆಗಳಾದ ವೈದ್ಯಕೀಯ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀ ರೋಗ ಚಿಕಿತ್ಸೆ, ಚಿಕ್ಕಮಕ್ಕಳ ಚಿಕಿತ್ಸೆ, ಚರ್ಮರೋಗ ಚಿಕಿತ್ಸೆ, ಇದಕ್ಕೆ ಬೆಂಬಲಿತ ಸೇವೆಗಳಾದ ಎಲ್ಲಾ ಬಗೆಯ ರಕ್ತ ಪರೀಕ್ಷೆಗಳು, ಔಷಧಾಲಯ, ತುರ್ತು ಸೇವೆಗಳು ಮತ್ತು 24x7 ಆಂಬೂಲನ್ಸ್ ಸೇವೆಗಳು ಸಿಗಲಿವೆ.
ಆಯುರ್ವೇದ ಚಿಕಿತ್ಸೆಗಳಾದ ಪಂಚಕರ್ಮ, ಕಾಯಚಿಕಿತ್ಸೆ, ಶಲ್ಯತಂತ್ರ, ಕಣ್ಣು, ಕಿವಿ, ಮೂಗುಗ, ಗಂಟಲು, ತಪಾಸಣೆ, ಪ್ರಸೂತಿ ಮತ್ತು ಸ್ತ್ರೀ ರೋಗ ತಪಾಸಣೆ, ಬಾಲ ರೋಗ ಚಿಕಿತ್ಸೆ, ಸ್ವಸ್ಥವೃತ್ತ ತಪಾಸಣೆ ನಡೆಯಲಿವೆ.
ಶಿಬಿರಾರಾಥಿಗಳಿಗೆ ವೈದ್ಯರ ಸಲಹೆಯ ಮೇರೆಗೆ ಉಚಿತವಾಗಿ ಔಷಧಿಗಳವಿತರಣೆ, ಪ್ರಾಥಮಿಕ ರಕ್ತ ಮತ್ತು ಮೂತ್ರ ತಪಾಸಣೆ ನಡೆಸಲಾಗುವುದು.
ವೈದ್ಯರ ಶಿಫಾರಸಿನ ಮೇರೆಗೆ ಅಗತ್ಯವಿರುವ ರೋಗಿಗಳಿಗೆ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗಾಗಿ ಆಶ್ರಮ ರಸ್ತೆಯಲ್ಲಿರುವ ಬಿ.ಎಲ್.ಡಿ.ಇ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ಅಲ್ಲಿ ಶೇ. 50 ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಒಳರೋಗಿಗಳಾಗಿ ದಾಖಲಾಗುವ ಶಿಬಿರಾರ್ಥಿಗಳು ಚಿಕಿತ್ಸೆಗೆ ಬೇಕಾಗುವ ಔಷಧಿ ವೆಚ್ಚವನ್ನು ತಾವೇ ಭರಿಸಬೇಕಾಗುತ್ತದೆ.
ಸಾರ್ವಜನಿಕರು ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ ಮೊಬೈಲ್ ಸಂಖ್ಯೆ 9513397413 ಮತ್ತು 9845517446 ಸಂಪರ್ಕಿಸಬಹುದಾಗಿದೆ ಎಂದು ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಮತ್ತು ಬಿ.ಎಲ್.ಡಿ.ಇ ಹೈಟೆಕ್ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande