ಕೊಪ್ಪಳ, 15 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಬೀದರ್‍ನಲ್ಲಿ ಜರುಗಿದ ಕಲಬುರಗಿ ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಬೀದರ್‍ನಲ್ಲಿ ಜರುಗಿದ ಕಲಬುರಗಿ ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ 14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಅನಿತಾ, ಶಾರದಾ, ಸ್ಪೂರ್ತಿ, ಸಿಂಧು, ಅರ್ಚನಾ, ಮಾನಸ ಮತ್ತು ಭೂಮಿಕಾ ಅವರನ್ನೊಳಗೊಂಡ ತಂಡ, 17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ದೀಕ್ಷಿತಾ, ಕಾವೇರಿ, ಲತಾ, ಸ್ಪೂರ್ತಿ, ಪ್ರಿಯಾಂಕ, ಪಾರ್ವತಿ ಹಾಗೂ ಯಲ್ಲಮ್ಮ ಅವರನ್ನೊಳಗೊಂಡ ತಂಡ ಮತ್ತು 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನಿಖಿಲ್, ರಿಷಿನಾಯಕ್, ಅಭಿಲಾಶ್, ಎಂ.ಡಿ.ಇಮ್‍ದಾದ್ ಶೇಖ್, ಶ್ರೀಶೈಲ್, ಚೇತನ್ ಹಾಗೂ ಪೂಜಿತ್ ಸಿಧು ಅವರನ್ನೊಳಗೊಂಡ ತಂಡಗಳು ಪ್ರಥಮ ಸ್ಥಾನ ಗಳಿಸಿ, ಅ.16 ರಂದು ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಕ್ರೀಡಾಪಟುಗಳಿಗೆ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡರ್, ವಾಲಿಬಾಲ್ ತರಬೇತುದಾರ ಸುರೇಶ, ಖೇಲೋ ಇಂಡಿಯಾ ವಾಲಿಬಾಲ್ ತರಬೇತುದಾರರಾದ ದೀಪಾ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್