ನವದೆಹಲಿ, 12 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರವು ಮಾಹಿತಿ ಹಕ್ಕು ಕಾಯ್ದೆಯ ಮೂಲ ಉದ್ದೇಶವನ್ನೇ ಹಾಳು ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
2019ರಲ್ಲಿ ಮಾಡಲಾದ ತಿದ್ದುಪಡಿಗಳ ಮೂಲಕ ಸರ್ಕಾರವು ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ತತ್ವಗಳನ್ನು ಕುಗ್ಗಿಸಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು 20 ವರ್ಷಗಳಾದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಹಿತಿ ಹಕ್ಕು ಕಾಯ್ದೆಯು ನಾಗರಿಕರು ಮತ್ತು ಮಾಧ್ಯಮಗಳಿಗೆ ಸರ್ಕಾರದ ಕಾರ್ಯಪದ್ಧತಿಯಲ್ಲಿ ಪಾರದರ್ಶಕತೆ ತರಲು ಮಹತ್ವದ ಸಾಧನವಾಗಿತ್ತು. ಆದರೆ, 2019ರ ತಿದ್ದುಪಡಿಗಳಿಂದ ಅದರ ಶಕ್ತಿಯನ್ನು ಸೀಮಿತಗೊಳಿಸಲಾಗಿದೆ,” ಎಂದು ಹೇಳಿದರು.
2005ರಲ್ಲಿ ಯುಪಿಎ ಸರ್ಕಾರ ಈ ಕಾನೂನು ತಂದಾಗ, ಅದನ್ನು ಸ್ಥಾಯಿ ಸಮಿತಿಗೆ ಕಳುಹಿಸಿ ಎಲ್ಲಾ ಶಿಫಾರಸುಗಳನ್ನು ಒಳಗೊಂಡು ಕಾನೂನನ್ನು ಅಂಗೀಕರಿಸಿತು. ಆದರೆ ಮೋದಿ ಸರ್ಕಾರ 2019ರಲ್ಲಿ ಸ್ಥಾಯಿ ಸಮಿತಿ ಸಲಹೆಗಳನ್ನು ತಿರಸ್ಕರಿಸಿ ಕಾಯ್ದೆಗೆ ಮೊದಲ ದೊಡ್ಡ ಹೊಡೆತ ನೀಡಿತು ಎಂದರು.
ಆರ್‌ಟಿಐ ಮೂಲಕ ಎನ್‌ಪಿಎ ಡೀಫಾಲ್ಟರ್‌ಗಳ ಪಟ್ಟಿ ಮತ್ತು ಕಪ್ಪು ಹಣದ ಹಿಂತಿರುಗುವಿಕೆಯ ಮಾಹಿತಿ ಕೋರಲಾಯಿತು, ಆದರೆ ಸರ್ಕಾರದಿಂದ ಯಾವುದೇ ಸ್ಪಷ್ಟ ಉತ್ತರ ಸಿಗಲಿಲ್ಲ. ಇವುಗಳಿಂದ ಸ್ಪಷ್ಟವಾಗುತ್ತದೆ ಸರ್ಕಾರವು ಸಾರ್ವಜನಿಕರಿಗೆ ಮಾಹಿತಿಯಿಂದ ವಂಚಿಸುತ್ತಿದೆ ಎಂದು ರಮೇಶ್ ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa