ನವದೆಹಲಿ, 12 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ತೀವ್ರವಾಗುತ್ತಿರುವ ಉದ್ವಿಗ್ನತೆಯ ನಡುವೆಯೇ, ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಶಾಂತಿಯ ಸಂದೇಶ ನೀಡಿದ್ದಾರೆ.
“ಅಫ್ಘಾನಿಸ್ತಾನ ಶಾಂತಿಯನ್ನು ಬಯಸುತ್ತದೆ, ಆದರೆ ತನ್ನ ಗಡಿಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಸಾಧ್ಯವಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು. ಪಾಕಿಸ್ತಾನ ಶಾಂತಿಗೆ ಒಪ್ಪದಿದ್ದರೆ “ಅಫ್ಘಾನಿಸ್ತಾನಕ್ಕೆ ಇತರ ಆಯ್ಕೆಗಳು ಇವೆ” ಎಂದು ಮುತ್ತಕಿ ಎಚ್ಚರಿಕೆ ನೀಡಿದರು.
ಕತಾರ್ ಮತ್ತು ಸೌದಿ ಅರೇಬಿಯಾದ ಮಧ್ಯಸ್ಥಿಕೆಯಿಂದ ಅಫ್ಘಾನ್ ಪಡೆಗಳು ಪ್ರಸ್ತುತ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಆದರೆ, ಪಾಕಿಸ್ತಾನ ಶಾಂತಿಗೆ ಸಮ್ಮತಿಸದಿದ್ದರೆ ಅಫ್ಘಾನಿಸ್ತಾನ ತನ್ನ ರೀತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಮುತ್ತಕಿ ಎಚ್ಚರಿಸಿದರು.
ನವದೆಹಲಿಯ ಅಫ್ಘಾನ್ ರಾಯಭಾರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುತ್ತಕಿ ಹಲವು ವಿಷಯಗಳ ಬಗ್ಗೆ ಮಾತನಾಡಿದರು.
ಪಾಕಿಸ್ತಾನದೊಂದಿಗೆ ಇರುವ ಗಡಿ ಉದ್ವಿಗ್ನತೆ ಪಾಕಿಸ್ತಾನದ ಸಾಮಾನ್ಯ ಜನತೆ ಮತ್ತು ಅನೇಕ ರಾಜಕಾರಣಿಗಳು ಅಫ್ಘಾನಿಸ್ತಾನದೊಂದಿಗೆ ಉತ್ತಮ ಸಂಬಂಧ ಬಯಸುತ್ತಾರೆ. ಆದರೆ ಕೆಲವು ಅಂಶಗಳು ಈ ಬಾಂಧವ್ಯವನ್ನು ಹಾಳು ಮಾಡಲು ಯತ್ನಿಸುತ್ತಿವೆ ಎಂದು ಹೇಳಿದರು.
ಅಫ್ಘಾನಿಸ್ತಾನವು ಪಾಕಿಸ್ತಾನದ ಒಳಗೆ ಸಂಘರ್ಷಗಳಿಗೆ ಕಾರಣವಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಮುತ್ತಕಿ, “ಟಿಟಿಪಿ (ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ) ಅಫ್ಘಾನಿಸ್ತಾನದಲ್ಲಿ ಅಸ್ತಿತ್ವದಲ್ಲಿಲ್ಲ. ಅಲ್ಲಿ ಇರುವವರು ಪಾಕಿಸ್ತಾನದಿಂದ ನಿರಾಶ್ರಿತರಾಗಿ ಬಂದವರು ಎಂದು ಸ್ಪಷ್ಟಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa