ನವದೆಹಲಿ, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭಾರತ ರತ್ನ ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ಬಿಹಾರದ ಸರನ್ ಜಿಲ್ಲೆಯ ಸೀತಾಬ್ಡಿಯಾರ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.
ಉಪರಾಷ್ಟ್ರಪತಿ ಅವರು ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಅವರ ಪೂರ್ವಜರ ಮನೆಯಲ್ಲಿ ಗೌರವ ನಮನ ಸಲ್ಲಿಸಲಿದ್ದು, ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಸ್ಮಾರಕದಲ್ಲಿ ಪುಷ್ಪಾಂಜಲಿ ಅರ್ಪಿಸಲಿದ್ದಾರೆ.
ಜೊತೆಗೆ, ಲೋಕನಾಯಕ್ ಅವರ ಪತ್ನಿ ಪ್ರಭಾವತಿ ದೇವಿಯ ಸ್ಮರಣಾರ್ಥ ಸ್ಥಾಪಿಸಲಾದ ಸೀತಾಬ್ಡಿಯಾರದಲ್ಲಿನ ಪ್ರಭಾವತಿ ಗ್ರಂಥಾಲಯಕ್ಕೂ ಅವರು ಭೇಟಿ ನೀಡಲಿದ್ದಾರೆ ಎಂದು ಉಪ ರಾಷ್ಟ್ರಪತಿ ಕಚೇರಿ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆ ತಿಳಿಸಿದೆ.
ಸೀತಾಬ್ಡಿಯಾರ ಗ್ರಾಮವು ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಸಾಮಾಜಿಕ ಕ್ರಾಂತಿಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಳವಾಗಿದೆ. ಬಿಹಾರದ ಸರನ್ ಮತ್ತು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಗಳ ಗಡಿಯಲ್ಲಿ, ಘಾಘ್ರಾ ಮತ್ತು ಗಂಗಾ ನದಿಗಳ ಸಂಗಮದ ತಟದಲ್ಲಿರುವ ಈ ಸ್ಥಳವು, ‘ಸಂಪೂರ್ಣ ಕ್ರಾಂತಿಯ’ ಪ್ರವರ್ತಕ ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಅವರ ಜನ್ಮಸ್ಥಳವಾಗಿ ದೇಶದ ರಾಜಕೀಯ ಮತ್ತು ಸಾಮಾಜಿಕ ಚಳವಳಿಗಳ ಇತಿಹಾಸದಲ್ಲಿ ವಿಶಿಷ್ಟ ಸ್ಥಾನಮಾನ ಪಡೆದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa