ನವದೆಹಲಿ, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದೇಶದ ಅತ್ಯಂತ ಜನನಿಬಿಡ ನಿಲ್ದಾಣಗಳಲ್ಲಿ ಒಂದಾದ ನವದೆಹಲಿ ರೈಲು ನಿಲ್ದಾಣದಲ್ಲಿ 7,000ಕ್ಕೂ ಹೆಚ್ಚು ಪ್ರಯಾಣಿಕರನ್ನು ಏಕಕಾಲದಲ್ಲಿ ಹೊಂದುವ ಸಾಮರ್ಥ್ಯದ ಆಧುನಿಕ ‘ಯಾತ್ರಿ ಸುವಿಧಾ ಕೇಂದ್ರ’ ಸಿದ್ಧಗೊಂಡಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಈ ಹೊಸ ಸೌಲಭ್ಯವನ್ನು ಪರಿಶೀಲಿಸಿದರು.
ಈ ಶಾಶ್ವತ ಕೇಂದ್ರವು ಟಿಕೆಟ್ ಇಲ್ಲದ ಪ್ರಯಾಣಿಕರಿಗೆ ವಿಶ್ರಾಂತಿ, ಕುಡಿಯುವ ನೀರು, ಶೌಚಾಲಯ, ಟಿಕೆಟ್ ಕೌಂಟರ್ ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ಒಂದೇ ಸ್ಥಳದಲ್ಲಿ ಒದಗಿಸುತ್ತದೆ. ಸುಮಾರು 2,860 ಚ.ಮೀ. ಟಿಕೆಟ್ ವಲಯ, 1,150 ಚ.ಮೀ. ಟಿಕೆಟ್ ನಂತರದ ವಲಯ, ಮತ್ತು 1,218 ಚ.ಮೀ. ಪೂರ್ವ ವಲಯ ಸೇರಿದಂತೆ ಮೂರು ವಿಭಾಗಗಳಲ್ಲಿ ಈ ಕೇಂದ್ರವನ್ನು ವಿನ್ಯಾಸಗೊಳಿಸಲಾಗಿದೆ.
ಒಟ್ಟು 22 ಟಿಕೆಟ್ ಕೌಂಟರ್‌ಗಳು, 25 ಸ್ವಯಂಚಾಲಿತ ಯಂತ್ರಗಳು, 18 ಸಿಸಿಟಿವಿ ಕ್ಯಾಮೆರಾಗಳು, 150 ಶೌಚಾಲಯಗಳು, 5 ಲಗೇಜ್ ಸ್ಕ್ಯಾನರ್‌ಗಳು, ಮತ್ತು 5 ಮೆಟಲ್ ಡಿಟೆಕ್ಟರ್ ಗೇಟ್‌ಗಳು ಸೇರಿದಂತೆ ಎಲ್ಲಾ ಆಧುನಿಕ ಭದ್ರತಾ ಮತ್ತು ಆರಾಮ ಸೌಲಭ್ಯಗಳನ್ನು ಒಳಗೊಂಡಿದೆ.
ಈ ಕುರಿತು ರೈಲ್ವೆ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡಿ, ಹಬ್ಬದ ಸಮಯದಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಈ ಕೇಂದ್ರ ಬಹು ಉಪಯುಕ್ತವಾಗಲಿದೆ ಎಂದರು. ಛಠ್ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಶೇಷ ರೈಲುಗಳನ್ನು ಹೆಚ್ಚುವರಿ ಪ್ರಮಾಣದಲ್ಲಿ ಓಡಿಸಲಾಗುವುದು ಎಂದೂ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa