ಪ್ರಧಾನಿ–ಕ್ವಾಲ್ಕಾಮ್ ಸಿಇಒ ಭೇಟಿ : ಎಐ, ೬ಜಿ ಸಹಯೋಗದ ಚರ್ಚೆ
ನವದೆಹಲಿ, 11 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕ್ವಾಲ್ಕಾಮ್ ಅಧ್ಯಕ್ಷ ಮತ್ತು ಸಿಇಒ ಕ್ರಿಸ್ಟಿಯಾನೊ ಆರ್. ಅಮೋನ್ ಅವರನ್ನು ಭೇಟಿಯಾಗಿ ಕೃತಕ ಬುದ್ಧಿಮತ್ತೆ, ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ ಹಾಗೂ 6G ತಂತ್ರಜ್ಞಾನ ಕುರಿತು ಚರ್ಚಿಸಿದರು. ಭಾರತದ ಸೆಮಿಕಂಡಕ್ಟರ
Meeting


ನವದೆಹಲಿ, 11 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕ್ವಾಲ್ಕಾಮ್ ಅಧ್ಯಕ್ಷ ಮತ್ತು ಸಿಇಒ ಕ್ರಿಸ್ಟಿಯಾನೊ ಆರ್. ಅಮೋನ್ ಅವರನ್ನು ಭೇಟಿಯಾಗಿ ಕೃತಕ ಬುದ್ಧಿಮತ್ತೆ, ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ ಹಾಗೂ 6G ತಂತ್ರಜ್ಞಾನ ಕುರಿತು ಚರ್ಚಿಸಿದರು.

ಭಾರತದ ಸೆಮಿಕಂಡಕ್ಟರ್ ಮತ್ತು AI ಕಾರ್ಯಾಚರಣೆಗಳಿಗೆ ಕ್ವಾಲ್ಕಾಮ್‌ನ ಬದ್ಧತೆಯನ್ನು ಪ್ರಧಾನಿ ಶ್ಲಾಘಿಸಿದರು. ಕ್ರಿಸ್ಟಿಯಾನೊ ಅಮೋನ್ ಅವರು ಭಾರತ–AI ಮತ್ತು ಸೆಮಿಕಂಡಕ್ಟರ್ ಮಿಷನ್‌ಗಳಲ್ಲಿ ಸಹಯೋಗ ಬಲಪಡಿಸುವ ಜೊತೆಗೆ ಸ್ಮಾರ್ಟ್‌ಫೋನ್‌ಗಳು, ಪಿಸಿಗಳು, ಆಟೋ ಮತ್ತು ಕೈಗಾರಿಕಾ ವಲಯಗಳಲ್ಲಿ ಭಾರತೀಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande