ಪಶ್ಚಿಮ ಸಿಂಗ್‌ಭೂಮ್, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಾರ್ಖಂಡನ ಸಾರಂಡಾ ಕಾಡಿನಲ್ಲಿ ಮಾವೊವಾದಿಗಳು ಇರಿಸಿದ್ದ ಐಇಡಿ ಸ್ಫೋಟದಲ್ಲಿ ಸಿಆರ್‌ಪಿಎಫ್ 60ನೇ ಬೆಟಾಲಿಯನ್‌ನ ಹೆಡ್ ಕಾನ್‌ಸ್ಟೆಬಲ್ ಮಹೇಂದ್ರ ಲಷ್ಕರ್ ಹುತಾತ್ಮರಾಗಿದ್ದು, ಘಟನೆಯಲ್ಲಿ ಇನ್ಸ್‌ಪೆಕ್ಟರ್ ಕೌಶಲ್ ಕುಮಾರ್ ಮಿಶ್ರಾ ಮತ್ತು ಎಎಸ್‌ಐ ರಾಮಕೃಷ್ಣ ಗಗ್ರೈ ಗಂಭೀರವಾಗಿ ಗಾಯಗೊಂಡು ರೂರ್ಕೆಲಾದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ಸಂಜೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಘಟನೆ ನಂತರ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಮಹೇಂದ್ರ ಲಷ್ಕರ್ ಅವರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa