ರಾಷ್ಟ್ರೀಯ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ಸಂಯೋಜಕರನ್ನು ನೇಮಿಸಿದ ಕಾಂಗ್ರೆಸ್
ನವದೆಹಲಿ, 11 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಮಟ್ಟದ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕಾಗಿ ಕಾಂಗ್ರೆಸ್ ಪಕ್ಷವು ಶನಿವಾರ ಆರು ವಲಯ ಸಂಯೋಜಕರು ಮತ್ತು ಸಹ-ಸಂಯೋಜಕರನ್ನು ನೇಮಿಸಿದೆ. ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಮಧ
ರಾಷ್ಟ್ರೀಯ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ಸಂಯೋಜಕರನ್ನು ನೇಮಿಸಿದ ಕಾಂಗ್ರೆಸ್


ನವದೆಹಲಿ, 11 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಮಟ್ಟದ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕಾಗಿ ಕಾಂಗ್ರೆಸ್ ಪಕ್ಷವು ಶನಿವಾರ ಆರು ವಲಯ ಸಂಯೋಜಕರು ಮತ್ತು ಸಹ-ಸಂಯೋಜಕರನ್ನು ನೇಮಿಸಿದೆ.

ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಮಧ್ಯಪ್ರದೇಶ–ಛತ್ತೀಸ್‌ಗಢ–ಉತ್ತರ ಪ್ರದೇಶ ವಲಯಕ್ಕೆ ಸಪ್ತಗಿರಿ ಉಲಕ ಸಂಯೋಜಕರಾಗಿ, ಅನಿಲ್ ಯಾದವ್ ಸಹ-ಸಂಯೋಜಕರಾಗಿ ನೇಮಕಗೊಂಡಿದ್ದಾರೆ. ಪೂರ್ವ ವಲಯದಲ್ಲಿ ಅತುಲ್ ಲೋಂಧೆ (ಸಂಯೋಜಕ) ಮತ್ತು ಮಹಿಮಾ ಸಿಂಗ್ (ಸಹ-ಸಂಯೋಜಕ) ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ ರಾಜ್ಯಗಳ ಜವಾಬ್ದಾರಿ ವಹಿಸಲಿದ್ದಾರೆ.

ಉತ್ತರ ವಲಯಕ್ಕೆ ಚರಣ್ ಸಪ್ರಾ ಅವರನ್ನು (ಚಂಡೀಗಢ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು–ಕಾಶ್ಮೀರ, ಲಡಾಖ್, ನವದೆಹಲಿ, ಪಂಜಾಬ್, ಉತ್ತರಾಖಂಡ) ವಲಯ ಸಂಯೋಜಕರಾಗಿ ನೇಮಿಸಲಾಗಿದೆ. ಈಶಾನ್ಯ ವಲಯದಲ್ಲಿ ರಾಗಿಣಿ ನಾಯಕ್ (ಸಂಯೋಜಕ) ಮತ್ತು ಮ್ಯಾಥ್ಯೂ ಆಂಟನಿ (ಸಹ-ಸಂಯೋಜಕ) ಅರುಣಾಚಲ ಪ್ರದೇಶದಿಂದ ತ್ರಿಪುರಾ ತನಕದ ರಾಜ್ಯಗಳಿಗೆ ನೇಮಕಗೊಂಡಿದ್ದಾರೆ.

ದಕ್ಷಿಣ ವಲಯದಲ್ಲಿ ಸಲ್ಮಾನ್ ಸೋಜ್ ಮತ್ತು ಸರಳ್ ಪಟೇಲ್, ಪಶ್ಚಿಮ ವಲಯದಲ್ಲಿ ಸುಪ್ರಿಯಾ ಶ್ರೀನೆಟ್ ಮತ್ತು ಸಾಧನಾ ಭಾರತಿ ಕ್ರಮವಾಗಿ ಸಂಯೋಜಕ–ಸಹ-ಸಂಯೋಜಕರಾಗಿ ನೇಮಕಗೊಂಡಿದ್ದಾರೆ.

ಈ ಪ್ರತಿಭಾನ್ವೇಷಣೆ ಕಾರ್ಯಕ್ರಮದ ಉದ್ದೇಶ ಯುವ ಹಾಗೂ ಪ್ರತಿಭಾನ್ವಿತ ಮುಖಗಳನ್ನು ಗುರುತಿಸಿ, ಅವರನ್ನು ಪಕ್ಷದ ಮಾಧ್ಯಮ ಮತ್ತು ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande