
ಬಳ್ಳಾರಿ, 08 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್: ಬಿಜೆಪಿಯ `ಲಿಂಗಸೂಗೂರು - ಬಳ್ಳಾರಿ' ಪಾದಯಾತ್ರೆಯ ಸಮಾರೋಪವನ್ನು ಬಳ್ಳಾರಿಯ ಮುನಿಸಿಪಲ್ ಮೈದಾನದಲ್ಲಿ ನಡೆಸಲು ಜಿಲ್ಲಾಡಳಿತ ನಿರಾಕರಿಸಿರುವ ಹಿನ್ನಲೆಯಲ್ಲಿ, ಜಿಲ್ಲಾ ಬಿಜೆಪಿಯು ಗಡಿಗೆ ಚನ್ನಪ್ಪ ವೃತ್ತದಲ್ಲಿ ಮಂಗಳವಾರ ಸಂಜೆ 4 ಗಂಟೆಗೆ ತುರ್ತು ಸಭೆಯನ್ನು ಹಮ್ಮಿಕೊಂಡಿದೆ.
ಈ ಕುರಿತು ಬಳ್ಳಾರಿ ನಗರ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ಕರೆ ನೀಡಿದ್ದು, `ಪ್ರಜಾಪ್ರಭುತ್ವ ಹಕ್ಕು, ನಮ್ಮೆಲ್ಲರ ಹಕ್ಕು' ಅಡಿಯಲ್ಲಿ ಹೋರಾಟ ನಡೆಯಲಿದೆ. ಅನೇಕ ಹಿರಿಯ ಮುಖಂಡರು ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲಿದ್ದಾರೆ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್