

ಬಳ್ಳಾರಿ, 27 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಹಿಂದುಳಿದ ವರ್ಗಗಳಲ್ಲಿನ ಉಪ್ಪಾರ ನೇಕಾರ ವಿಶ್ವಕರ್ಮ ಮಡಿವಾಳ ಸೇರಿದಂತೆ ಇತರೆ ಅತಿ ಸಣ್ಣ ಜಾತಿಗಳು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಒಗ್ಗಟ್ಟಿನ ಹೋರಾಟದಿಂದ ಮಾತ್ರ ಸಾಧ್ಯ ಎಂದು ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರರಾದ ಪಿ ಗಾದೆಪ್ಪ ಅಭಿಪ್ರಾಯ ಪಟ್ಟರು.
ಅವರು ಇಂದು ನಗರದ 9ನೇ ವಾರ್ಡಿನ ಬಿ ಗೋನಾಳ ಪ್ರದೇಶದಲ್ಲಿರುವ ಉಪ್ಪಾರ ವಿದ್ಯಾರ್ಥಿ ನಿಲಯದಲ್ಲಿ ಶ್ರೀ ಭಗೀರಥ ಉಪ್ಪಾರ ನೌಕರರ ಸಂಘ, ವೃತ್ತಿಪರ ನೌಕರರ ಸಂಘ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಹಿಂದುಳಿದ ವರ್ಗಗಳಲ್ಲಿ ಹಲವಾರು ಜಾತಿಗಳಿವೆ . ಅವುಗಳಲ್ಲಿ ಕೆಲವು ಸಾಮಾಜಿಕವಾಗಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಾ ಇವೆ ಆದರೆ ಇಂತಹ ಸಣ್ಣ ಜಾತಿಗಳಲ್ಲಿ ನಮ್ಮ ನಮ್ಮಲ್ಲೇ ಕಾಲು ಎಳೆಯುತ್ತಾ ನಾವೇ ಕೈಯಾರ ನಮ್ಮ ಸಮಾಜದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತೇವೆ ಹಾಗಾಗಲು ಬಿಡದೆ ಎಲ್ಲಾ ಹಿಂದುಳಿದ ವರ್ಗಗಳ ಸಣ್ಣ ಜಾತಿಗಳವರು ಒಗ್ಗಟ್ಟಿನ ಹೋರಾಟದಿಂದ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಭಗಿರಥ ಉಪ್ಪಾರ ವಿದ್ಯಾರ್ಥಿನಿಲಯಕ್ಕೆ ಸರ್ಕಾರದಿಂದ ಏನಾದರೂ ಸೌಲಭ್ಯಗಳು ಬೇಕಾದಲ್ಲಿ ಮನವಿ ಪತ್ರದೊಂದಿಗೆ ಸಂಘದ ಬೈಲಾ ಸೇರಿದಂತೆ ಕಾನೂನು ಪ್ರಕಾರ ಬೇಕಾದ ಎಲ್ಲಾ ದಾಖಲೆಗಳನ್ನು ಒದಗಿಸಿದಲ್ಲಿ ಸೌಲಭ್ಯಗಳನ್ನು ಮಹಾನಗರ ಪಾಲಿಕೆಯಿಂದ ಒದಗಿಸಲು ಪ್ರಯತ್ನಿಸುತ್ತೇನೆ ಇದು ತಕ್ಷಣಕ್ಕೆ ಸಿಗುವಂತದ್ದು ಅಲ್ಲ ಅಧಿಕಾರಿಗಳ ಬೆನ್ನು ಬೀಳಬೇಕು ಆಗ ಮಾತ್ರ ನಮಗೆ ಕೆಲಸ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು ಗಾಂಧಿನಗರ ಮುಖ್ಯ ರಸ್ತೆಯ ರೇಣುಕಾ ಕಿಚ್ಚನ್ ಎದುರುಗಡೆಯಲ್ಲಿ ಭಗೀರಥ ವೃತ್ತ ನಾಮಕರಣಕ್ಕೆ ಈಗಾಗಲೇ ಮಹಾನಗರ ಪಾಲಿಕೆಯಲ್ಲಿ ಅನುಮತಿ ದೊರೆತಿರುತ್ತದೆ ಇನ್ನೂ ಕೇವಲ ಪೊಲೀಸ್ ಇಲಾಖೆಯಿಂದ ಅನುಮತಿ ಪತ್ರ ಬಂದ ತಕ್ಷಣ ಆ ವೃತ್ತವನ್ನು ಉದ್ಘಾಟಿಸಲು ಪ್ರಯತ್ನಿಸುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಬಳ್ಳಾರಿ ತಾಲೂಕು ಭಗಿರಥ ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಉಪ್ಪಾರ್ ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಜಯರಾಮ್, ಬಳ್ಳಾರಿ ಜಿಲ್ಲಾ ಭಗೀರಥ ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಹನುಮೇಶ್, ನೌಕರರ ಸಂಘದ ಉಪಾಧ್ಯಕ್ಷರಾದ ಯು ನರಸಣ್ಣ ಸಹ ಕಾರ್ಯದರ್ಶಿ ಚಿದಾನಂದ ಯು ಶೇಷಾದ್ರಿ ಜಂಟಿ ಕಾರ್ಯದರ್ಶಿ ಯು ವೀರೇಶ್ ಯು ಗೋವಿಂದ, ಸಿರವಾರ ನಾಗರಾಜ್, ಕೊಳಗಲ್ಲು ಬಸವರಾಜ್, ಭಗಿರಥ ಉಪ್ಪಾರ ಟ್ರಸ್ಟ್ ತಾಲೂಕ ಅಧ್ಯಕ್ಷ ಚಂದ್ರಣ್ಣ ಪ್ರಧಾನ ಕಾರ್ಯದರ್ಶಿ, ನಾಗೇಂದ್ರ, ಕಾರ್ಯದರ್ಶಿ ಮೀಟರ್ ಕೃಷ್ಣ, ಎಸ್ಪಿ ಸರ್ಕಲ್ ಮಧು ಸೇರಿದಂತೆ ಹಲವಾರು ಜನ ಉಪ್ಪಾರ ಸಮುದಾಯದ ಮುಖಂಡರು ಇದ್ದರು.
ಡಾಕ್ಟರ್ ನವೀನ್ ಮತ್ತು ತಂಡ ಶಿಬಿರದಲ್ಲಿ ಆರೋಗ್ಯ ತಪಾಸಣೆಯನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಶ್ರೀನಿಕಾ ಪ್ರಾರ್ಥಿಸಿದರು ಕೊಳಗಲ್ಲು ಎರಿಸ್ವಾಮಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು, ಕುಮಾರಿ ನಕ್ಷತ್ರ ಭರತನಾಟ್ಯವನ್ನು ಪ್ರಸ್ತುತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್