ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಿಸುವ ಮೂಲಕ ಸೇವಾ ಸಂಕಲ್ಪ ಅಭಿಯಾನಕ್ಕೆ ಶಾಸಕ ವೈ.ಎಂ. ಸತೀಶ್ ಚಾಲನೆ
ಬಳ್ಳಾರಿ, 17 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷಗಳ ಸುದೀರ್ಘ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ನೆನಪಿಗಾಗಿ ದೇಶಾದ್ಯಂತ `ಸೇವಾ ಸಂಕಲ್ಪ ಅಭಿಯಾನ'' ನಡೆದಿದೆ. ಈ ಹಿನ್ನಲೆಯಲ್ಲಿ ಬಳ್ಳಾರಿಯಲ್ಲಿ ವಿಧಾನಪರಿಷತ್ ಸದಸ್ಯರಾದ ವೈ.ಎಂ
ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಿಸುವ ಮೂಲಕ `ಸೇವಾ ಸಂಕಲ್ಪ ಅಭಿಯಾನ' : ಶಾಸಕ ವೈ.ಎಂ. ಸತೀಶ್


ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಿಸುವ ಮೂಲಕ `ಸೇವಾ ಸಂಕಲ್ಪ ಅಭಿಯಾನ' : ಶಾಸಕ ವೈ.ಎಂ. ಸತೀಶ್


ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಿಸುವ ಮೂಲಕ `ಸೇವಾ ಸಂಕಲ್ಪ ಅಭಿಯಾನ' : ಶಾಸಕ ವೈ.ಎಂ. ಸತೀಶ್


ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಿಸುವ ಮೂಲಕ `ಸೇವಾ ಸಂಕಲ್ಪ ಅಭಿಯಾನ' : ಶಾಸಕ ವೈ.ಎಂ. ಸತೀಶ್


ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಿಸುವ ಮೂಲಕ `ಸೇವಾ ಸಂಕಲ್ಪ ಅಭಿಯಾನ' : ಶಾಸಕ ವೈ.ಎಂ. ಸತೀಶ್


ಬಳ್ಳಾರಿ, 17 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷಗಳ ಸುದೀರ್ಘ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ನೆನಪಿಗಾಗಿ ದೇಶಾದ್ಯಂತ `ಸೇವಾ ಸಂಕಲ್ಪ ಅಭಿಯಾನ' ನಡೆದಿದೆ.

ಈ ಹಿನ್ನಲೆಯಲ್ಲಿ ಬಳ್ಳಾರಿಯಲ್ಲಿ ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರ ನೇತೃತ್ವದಲ್ಲಿ ನಗರದ ವಿವಿಧ ಅಂಗನವಾಡಿ ಮಕ್ಕಳಲ್ಲಿಯ ಅಪೌಷ್ಠಿಕತೆಯ ಸಮಸ್ಯೆಯ ನಿವಾರಣೆಗಾಗಿ ಪೌಷ್ಠಿಕ ಆಹಾರ (ಸಪ್ಲಿಮೆಂಟ್)ವನ್ನು ವಿತರಣೆ ಮಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ ವೃದ್ಧಿಗಾಗಿ, ಆಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು ಸುದ್ದಿಗಾರರ ಜೊತೆ ಮಾತನಾಡಿ,

ರಾಷ್ಟ್ರದಾದ್ಯಂತ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17, 2026 ರವರೆಗೆ ಒಂದು ತಿಂಗಳ ಬೃಹತ್ ಜನಸೇವಾ ಅಭಿಯಾನ ನಡೆಯುತ್ತಿದೆ. ಪ್ರಧಾನಿ ಮೋದಿ ಅವರು ಅಕ್ಟೋಬರ್ 2001 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ, ಭಾರತದ ಪ್ರಧಾನಿಯಾಗಿ ನಿರಂತರ ದೇಶಸೇವೆಯನ್ನು ನಡೆಸುತ್ತಿದ್ದಾರೆ. `ವಿಕಸಿತ ಭಾರತ @ 2047' ಗುರಿಯನ್ನು ತಲುಪಲು ನಿರಂತರ ಶ್ರಮಿಸುತ್ತಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಸುದೀರ್ಘ ಸೇವೆಗೆ ಕೃತಜ್ಞತೆಗಳನ್ನು ಸಲ್ಲಿಸುವ ನಿಟ್ಟಿನಲ್ಲಿ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು `ಸೇವಾ ಸಂಕಲ್ಪ ಅಭಿಯಾನ'ದಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುತ್ತಿದ್ದಾರೆ. ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಹೀಗೇ ನಾನಾ ರೀತಿಯಲ್ಲಿ ಸಮಾಜ ಸೇವೆಯ ಕಾರ್ಯಕ್ರಮಗಳು ಅಭಿಯಾನದ ಭಾಗವಾಗಿವೆ ಎಂದರು.

ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಈ ಸಂದರ್ಭದಲ್ಲಿ ಎಲ್ಲಾ ಅಂಗನವಾಡಿಗಳ ಸಿಬ್ಬಂದಿಗಳು ಮತ್ತು ಕಾರ್ಯಕರ್ತರಿಗೆ ಸನ್ಮಾನ ಮಾಡಿ, ಗೌರವಿಸಿ ಅವರ ಸೇವೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಡಾ. ಅರುಣ ಕಾಮಿನೇನಿ, ಜಿಲ್ಲಾ ಕಾರ್ಯದರ್ಶಿಗಳಾದ ಡಾ. ರೇಣುಕಾ, ಕೌಲ್ಬಜಾರ್ನ ಮಂಡಳ ಅಧ್ಯಕ್ಷರಾದ ವಿ. ನಾಗರಾಜರೆಡ್ಡಿ, ಮಾಜಿ ಅಧ್ಯಕ್ಷರಾದ ಶಂಕರಪ್ಪ, ಉಪಾಧ್ಯಕ್ಷರಾದ ವೆಂಕಟೇಶ್, ಪ್ರಧಾನ ಕಾರ್ಯದರ್ಶಿಗಳಾದ ಜಿ. ಅವಿನಾಶ್ ನಾಯ್ಡು, ಪ್ರಧಾನ ಕಾರ್ಯದರ್ಶಿಗಳಾದ ಎಂ.ಪಿ. ರಾಜೇಶ್, ಪ್ರಮುಖರಾದ ಅಲವೇಲಮ್ಮ, ರಾಜ್ಯ ಎಸ್ಪಿ ಮೋರ್ಚಾ ಸದಾಶಯರಾದ ವಿಜಯಲಕ್ಷ್ಮಿ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಾಯರಾದ ನೂರ್ ಭಾಷ, ಒಪಿಸಿ ಮೋರ್ಚಾ ಅಧ್ಯಕ್ಷರಾದ ಶೇಖಣ್ಣ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande