
ಕೋಲಾರ, ಆಗಸ್ಟ್ ೧೫, (ಹಿ.ಸ.):
ಆ್ಯಂಕರ್ : ದೇಶವನ್ನು ವಿಜ್ಞಾನ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಮುನ್ನಡೆಸುವ ಜೊತೆಗೆ ಪ್ರತಿಯೊಬ್ಬ ಭಾರತೀಯರು ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರುವಂತಾಗಬೇಕೆ0ದು ಜಿಲ್ಲಾ ಭಾರತ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾರತ ಸೇವಾದಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಹಳೇ ಮಾಧ್ಯಮಿಕ ಶಾಲೆ, ಉರ್ದು ಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ೮೦ನೇ ಸ್ವಾತಂತ್ರ್ಯ ದಿನಾಚರಣೆ ದಿನಾಚರಣೆಯಲ್ಲಿ ಮಾತನಾಡಿದರು.
ದೇಶವು ಕಳೆದ ೮೦ ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದ್ದು, ವಿಶ್ವದ ಪ್ರಗತಿಶೀಲ ರಾಷ್ಟçಗಳ ಸಾಲಿಗೆ ಸೇರುವಂತಾಗುತ್ತಿದೆ, ಆದರೆ, ಭಾರತ ದೇಶವು ಮಾನವೀಯತೆಯನ್ನು ಸಾರುವಲ್ಲಿ ಮಂಚೂಣಿಯಲ್ಲಿದ್ದು, ಪ್ರಗತಿ, ಅಭಿವೃದ್ಧಿ ಜೊತೆಗೆ ಮಾನವೀಯ ಸಂಬಂಧಗಳ ಮಹತ್ವವನ್ನು ಜಗತ್ತಿಗೆ ಸಾರುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಮಾತನಾಡಿ, ದೇಶದ ಸ್ವಾತಂತ್ರಕ್ಕಕಾಗ ಹೋರಾಡಿದ ಭಾರತ ಸೇವಾದಳದ ಚಟುವಟಿಕೆಗಳನ್ನು ಶಾಲಾ ಶಿಕ್ಷಣ ಇಲಾಖೆಯಲ್ಲಿ ಕಡ್ಡಾಯವಾಗಿ ನಡೆಸುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ದೇಶಾಭಿಮಾನವನ್ನು ಮೂಡಿಸುವ ಕಾರ್ಯವನ್ನು ಶಾಲಾ ಶಿಕ್ಷಣ ಇಲಾಖೆಯು ನಡೆಸುತ್ತಿದೆ, ಯುವ ಪೀಳಿಗೆಯನ್ನು ಭಾರತ ನೇ ಸ್ವಾತಂತ್ರö್ಯ ಶತಮಾನೋತ್ಸವಕ್ಕೆ ಸಜ್ಜುಗೊಳಿಸಲು ಶಿಕ್ಷಣ ಇಲಾಖೆಯೊಂದಿಗೆ ಭಾರತ ಸೇವಾದಳ ಚಟುವಟಿಕೆಗಳು ಅತ್ಯಗತ್ಯ, ಇದಕ್ಕಾಗಿಯೇ ಶಿಕ್ಷಕರು ಪ್ರತಿ ಶಾಲೆಯಲ್ಲಿಯೂ ಸೇವಾದಳ ಚಟುವಟಿಕೆಗಳನ್ನು ನಡೆಸಬೇಕೆಂದು ಹೇಳಿದರು.
ಧ್ವಜಾರೋಹಣ ನೆರವೇರಿಸಿದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸುಮಾರು ಒಂದು ಶತಮಾನಕ್ಕೂ ಹಿಂದೆ ಆರಂಭವಾದ ಸ್ವಾತಂತ್ರ÷್ಯ ಚಳವಳಿಯಿಂದಾಗಿ ಅದರಲ್ಲೂ ಜಗತ್ತಿಗೆ ಅಹಿಂಸಾತ್ಮಕ ಹೋರಾಟವನ್ನು ಪರಿಚಯಿಸಿತು. ಮಹಾತ್ಮ ಗಾಂಧೀಜಿಯವರ ನಾಯಕತ್ವದಿಂದಾಗಿ ದೇಶವು ಸ್ವಾತಂತ್ರ÷್ಯವನ್ನು ಕಳೆದ ೮೦ ವರ್ಷಗಳ ಹಿಂದೆ ಪಡೆಯಿತು. ದೇಶವು ೧೦೦ನೇ ನೇ ಸ್ವಾತಂತ್ರö್ಯ ದಿನಾಚರಣೆ ಆಚರಿಸುವ ಹೊತ್ತಿಗೆ ಜಗತ್ತಿನ ಮಂಚೂಣಿ ರಾಷ್ಟçವಾಗಿ ನಿರ್ಮಾಣ ಮಾಡುವ ಹೊಣೆಗಾರಿಕೆ ಯುವ ವಿದ್ಯಾರ್ಥಿಗಳ ಮೇಲಿದ್ದು, ಶಾಲಾ ಶಿಕ್ಷಣ ಇಲಾಖೆಯು ಈ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಕೆ.ಲೀಲಾ, ಭಾರತ ಸೇವಾದಳ ಪ್ರಧಾನ ಕಾರ್ಯದರ್ಶಿ ಎಸ್.ಸುಧಾಕರ್, ತಾಲೂಕು ಅಧ್ಯಕ್ಷ ಶ್ರೀರಾಮ್, ಪದಾಧಿಕಾರಿಗಳಾದ ವಿ.ಪಿ.ಸೋಮಶೇಖರ್, ಜಯದೇವ್, ಅಪ್ಪಿ ನಾರಾಯಣಸ್ವಾಮಿ, ಗೋಕುಲ ಚಲಪತಿ, ಮುನಿವೆಂಕಟ ಯಾದವ್, ಪೈಂಟರ್ ಬಷೀರ್ ಅಹಮದ್, ಆರ್.ಶ್ರೀನಿವಾಸನ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಿಬ್ಬಂದಿ, ಮೂರು ಸರಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಭಾರತ ಸೇವಾದಳ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಕಳೆದ ತಿಂಗಳು ನಿವೃತ್ತರಾದ ಕಾರಣ ಅವರನ್ನು ಭಾರತ ಸೇವಾದಳವತಿಯಿಂದ ಸತ್ಕರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್