ಬುಡಕಟ್ಟು ವಸತಿ ಶಾಲೆ: ಖಾಲಿ ಇರುವ ಸ್ಥಾನಗಳಿಗೆ ಅರ್ಜಿ ಆಹ್ವಾನ
ಕೊಪ್ಪಳ, 20 ಜುಲೈ (ಹಿ.ಸ.): ಆ್ಯಂಕರ್ : ಯಲಬುರ್ಗಾ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಯಡ್ಡೋಣಿ (ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣ, ಗುನ್ನಾಳ) ಯಲ್ಲಿ 2026-27 ನೇ ಸಾಲಿನ 6, 7 ಮತ್ತು 8ನೇ ತರಗತಿಯಲ್ಲಿ
ಬುಡಕಟ್ಟು ವಸತಿ ಶಾಲೆ: ಖಾಲಿ ಇರುವ ಸ್ಥಾನಗಳಿಗೆ ಅರ್ಜಿ ಆಹ್ವಾನ


ಕೊಪ್ಪಳ, 20 ಜುಲೈ (ಹಿ.ಸ.):

ಆ್ಯಂಕರ್ : ಯಲಬುರ್ಗಾ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಯಡ್ಡೋಣಿ (ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣ, ಗುನ್ನಾಳ) ಯಲ್ಲಿ

2026-27 ನೇ ಸಾಲಿನ 6, 7 ಮತ್ತು 8ನೇ ತರಗತಿಯಲ್ಲಿ ಖಾಲಿ ಇರುವ ಸ್ಥಾನಗಳಿಗೆ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಲಬುರ್ಗಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಸತಿ ಶಾಲೆಯ 6ನೇ ತರಗತಿಯಲ್ಲಿ ಪರಿಶಿಷ್ಟ ವರ್ಗದ 9 ಸ್ಥಾನಗಳು(ಗಂಡು-4, ಹೆಣ್ಣು-5), 7 ನೇ ತರಗತಿಯಲ್ಲಿ ಪರಿಶಿಷ್ಟ ವರ್ಗದ 7 ಸ್ಥಾನಗಳು(ಗಂಡು-3, ಹೆಣ್ಣು-4) ಹಾಗೂ 8 ನೇ ತರಗತಿಯಲ್ಲಿ ಪರಿಶಿಷ್ಟ ವರ್ಗದ 10 ಸ್ಥಾನಗಳು(ಗಂಡು-4, ಹೆಣ್ಣು-6) ಖಾಲಿ ಇದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿಗಳನ್ನು ಸಹಾಯಕ ನಿರ್ದೇಶಕರು (ಗ್ರೇಡ್-2) ಸಮಾಜ ಕಲ್ಯಾಣ ಇಲಾಖೆ, ಯಲಬುರ್ಗಾ ಅಥವಾ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಯಡ್ಡೋಣಿ (ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣ, ಗುನ್ನಾಳ)ಯಲ್ಲಿ ಪಡೆಯಬಹುದು.

ಭರ್ತಿ ಮಾಡಿದ ಅರ್ಜಿಯ ಜೊತೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಪಡಿತರ ಚೀಟಿ ಹಾಗೂ ಆಧಾರ್ಕಾರ್ಡ್ ಎಲ್ಲಾ ದಾಖಲೆಗಳ ಝರಾಕ್ಷ್ ಪ್ರತಿಗಳನ್ನು ದೃಢೀಕರಿಸಿ ಹಾಗೂ ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಲಗತ್ತಿಸಿ ಜುಲೈ 27 ರೊಳಗಾಗಿ ಈ ಕಛೇರಿಗೆ ಅಥವಾ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಯಡ್ಡೋಣಿಯಲ್ಲಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಮುಖ್ಯೋಪಾಧ್ಯಾಯರು ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ, ಯಡ್ಡೋಣಿ ರವರನ್ನು ಹಾಗೂ ಮೊ.ಸಂಖ್ಯೆ: 7760651926, 9686588516 ಗೆ ಸಂಪರ್ಕಿಸಬಹುದು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande