
ಕೋಲಾರ, ೨೮ ಜೂನ್ (ಹಿ.ಸ) :
ಆ್ಯಂಕರ್ : ಅನಾರೋಗ್ಯದಿಂದ ನಿಧನರಾದ ಜಿಲ್ಲೆಯ ಹಿರಿಯ ದಲಿತ ಮುಖಂಡ ಯುಗಂಧರ್ ನಾರಾಯಣಸ್ವಾಮಿ ಅವರ ನುಡಿನಮನ ಕಾರ್ಯಕ್ರಮವನ್ನು ನಗರದ ನಚಿಕೇತನ ನಿಲಯದ ಬುದ್ದ ಮಂದಿರದಲ್ಲಿ ಭಾನುವಾರ ದಲಿತ ಸಂಘಟನೆಗಳ ಸಂಯುಕ್ತ ರಂಗದಿAದ ಆಚರಣೆ ಮಾಡಲಾಯಿತು.
ಸಂಯುಕ್ತರ0ಗದ ಜಿಲ್ಲಾ ಅಧ್ಯಕ್ಷ ಡಿಪಿಎಸ್ ಮುನಿರಾಜು ಮಾತನಾಡಿ ಜಿಲ್ಲೆಯಲ್ಲಿ ದಲಿತ ಚಳುವಳಿಯನ್ನು ಕಟ್ಟಿ ದಲಿತರ ಧ್ವನಿಯಾಗಿದ್ದ ನಾರಾಯಣಸ್ವಾಮಿ ಅವರ ಹೋರಾಟದ ಆದರ್ಶ ಮತ್ತು ಚಳುವಳಿಯ ಇತಿಹಾಸವು ಇವತ್ತಿನ ಯುವ ಪೀಳಿಗೆ ಅನುಸರಿಸಬೇಕಾಗಿದೆ ಎಂದು ತಿಳಿಸಿದರು.
ದಮನಿತರ ಸೇವಾ ಸಮಿತಿ ಅಧ್ಯಕ್ಷ ಮೇಡಿಹಾಳ ಮುನಿಅಂಜಿನಪ್ಪ ಮಾತನಾಡಿ ಸಮಾಜದ ಶೋಷಿತರ ಧ್ವನಿಯಾಗಿ ಕೆಲಸ ಮಾಡಿದ್ದಾರೆ ಅವರು ಹಿಂದೆ ದಲಿತ ಸಂಘಟನೆಗಳು ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದರ ಭಾಗವಾಗಿಯೇ ಸಂಯುಕ್ತ ರಂಗವನ್ನು ಸ್ಥಾಪಿಸಿದರು ಇವತ್ತಿನ ದಲಿತ ಸಂಘಟನೆಗಳು ಒಗ್ಗಟ್ಟಿನ ಮೂಲಕ ಸಂಘಟನೆಯನ್ನು ಬಲಪಡಿಸಿ ಬಡವರ ದಲಿತರ ಧ್ವನಿಯಾಗಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ದಲಿತ ಮುಖಂಡರು ಜವಾಬ್ದಾರಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ನುಡಿನಮನ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾಜಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮೈಲಾರಪ್ಪ, ತಾಲೂಕು ಅಧಿಕಾರಿ ಗೋಪಿನಾಥ್, ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಗಾಂಧಿನಗರ ಶ್ರೀನಿವಾಸ್, ಡಿಲಿಟ್ ಚಂದ್ರಶೇಖರ್, ಹಾರೋಹಳ್ಳಿ ರವಿ, ಗಾಂಧಿನಗರ ರಾಜಕುಮಾರ್, ದಲಿತ್ ನಾರಾಯಣಸ್ವಾಮಿ, ರವೀಂದ್ರ, ಚಂದ್ರಮೌಳಿ, ನಾರಾಯಣಪ್ಪ, ಜ್ಞಾನೇಶ್, ಮಂಜುಳಾ, ಗಿರಿಜಾ, ಮೋಚಿಪಾಳ್ಳ ನಾಗೇಶ್, ರಮೇಶ್, ಸೋಮಶೇಖರ್, ನರಸಾಪುರ ಎಸ್ ನಾರಾಯಣಸ್ವಾಮಿ, ಅಂಬರೀಶ್, ವೆಂಕಟಾಚಲಪತಿ, ಶಿಲ್ಲಂಗೆರೆ ಆನಂದ್, ಯುವರಾಜ್, ಡಿ.ಎಂ ಮುನಿರಾಜು ಹೂಹಳ್ಳಿ ಕೃಷ್ಣಪ್ಪ ಭಾಗವಹಿಸಿದ್ದರು.
ಈನೆಲ ಈಜಲ ವೆಂಕಟಾಚಲಪತಿ ತಂಡದಿ0ದ ಕ್ರಾಂತಿ ಗೀತೆಗಳನ್ನು ಹಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್